Home Entertainment ACP Chandan: ದರ್ಶನ್ ಅರೆಸ್ಟ್ ಮಾಡಿ ಮಿಂಚಿದ್ದ ಎಸಿಪಿ ಚಂದನ್ ಈಗ ಪುನೀತ್ ಕೆರೆಹಳ್ಳಿಯ ಆ...

ACP Chandan: ದರ್ಶನ್ ಅರೆಸ್ಟ್ ಮಾಡಿ ಮಿಂಚಿದ್ದ ಎಸಿಪಿ ಚಂದನ್ ಈಗ ಪುನೀತ್ ಕೆರೆಹಳ್ಳಿಯ ಆ ಕೇಸಲ್ಲಿ ಅಂದರ್? ಏನಿದು ಶಾಕಿಂಗ್ ನ್ಯೂಸ್?

Hindu neighbor gifts plot of land

Hindu neighbour gifts land to Muslim journalist

ACP Chandan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರಾತ್ರೋರಾತ್ರಿ ನಟ ದರ್ಶನ್‌(Darshan) ನನ್ನು ಭೇಟೆಯಾಡಿ ಬಂಧಿಸಿ, ರಾಜ್ಯಾದ್ಯಂತ ಸುದ್ದಿಯಾಗಿದ್ದ ಎಸಿಪಿ ಚಂದನ್‌ ಕುಮಾರ್‌ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದೆ.

ಪವಿತ್ರ ಗೌಡ ಹಾಗೂ ರೇಣುಕಾಸ್ವಾಮಿ(Renukaswamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧಿಸಿ ಎಸಿಪಿ ಚಂದನ್‌(ACP Chandan) ಕುಮಾರ್‌ ಅವರು ಹಿರೋ ಆಗಿದ್ದರು. ಅಲ್ಲದೆ, ದಕ್ಷ ಅಧಿಕಾರಿ ಅಂತಲೂ ಗುರುತಿಸಿಕೊಂಡಿದ್ದರು. ಈ ಪಕ್ರಣದ ತನಿಖೆಯನ್ನು ಗಂಭೀರವಾಗಿ ತೆಗೆದಕೊಂಡ ಕಾರಣ ಅವರು ರಾಜ್ಯದ ಸ್ಟಾರ್‌ ಆಗಿ ಮಿಂಚಿದ್ದರು. ಇದೀಗ ಅವರ ವಿರುದ್ಧವೇ ಗಂಭೀರ ಆರೋಪವೊಂದು ಕೇಳಿಬಂದಿದೆ.

ಹೌದು, ಪುನೀತ್ ಕೆರೆಹಳ್ಳಿ ಅವರನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಅವಮಾನಿಯವಾಗಿ ನಡೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಎಸಿಪಿ ಚಂದನ್‌ ಕುಮಾರ್‌ ಮೇಲೆ ಆರೋಪ ಕೇಳಿಬಂದಿತ್ತು. ಇನ್ನೂ ಈ ಆರೋಪಕ್ಕೆ ಸಂಬಂಧಿಸಿದಂತೆ ಎಸಿಪಿ ಚಂದನ್ ಕುಮಾರ್ ವಿರುದ್ಧ ರಾಜ್ಯ ಮಾನವ ಹಕ್ಕು ಆಯೋಗ ತನಿಖೆಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.

ಅಂದಹಾಗೆ ಈ ವಿಚಾರ ಸಂಬಂಧ ಪುನೀತ್ ಕೆರೆಹಳ್ಳಿ ದೂರು ನೀಡಿದ್ದರು. ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲೈಂಗಿಕ ಕಿರುಕುಳ ನೀಡಲಾಗಿದೆ ಎನ್ನಲಾಗಿತ್ತು. ‘ಜುಲೈ 26ರಂದು ರಾತ್ರಿ 9 ಗಂಟೆ ಸುಮಾರಿಗೆ ಕಾಟನ್ ಪೇಟೆ ಪೊಲೀಸರು ಕಾರಣ ತಿಳಿಸಿ ಬಲವಂತವಾಗಿ ನನ್ನನ್ನು ಠಾಣೆಗೆ ಕರೆದುಕೊಂಡು ಹೋದರು. ಆಗ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಷ್ಟೇ ಅಲ್ಲದೆ ಎಸಿಪಿ ಚಂದನ್ ಕುಮಾರ್ ಅವರು ಲಾಠಿಯಿಂದ ಜೋರಾಗಿ ಹೊಡೆದು, ನಗ್ನಗೊಳಿಸಿ, ಲೈಂಗಿಕ ಕಿರುಕುಳ ನೀಡಿದರು’ ಎಂದು ಆರೋಪ ಮಾಡಿದ್ದಾರೆ. ಇನ್ನು ಈ ಸಂಬಂಧ ಇದೀಗ ರಾಜ್ಯ ಮಾನವ ಹಕ್ಕು ಆಯೋಗ ತನಿಖೆ ನಡೆಸುವಂತೆ ಉಪ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ. ನಾಲ್ಕು ವಾರಗಳಲ್ಲಿ ಇದರ ವರದಿ ನೀಡುವಂತೆ ಸೂಚನೆ ನೀಡಿದೆ.