Home Entertainment ತುಳು ಚಿತ್ರ ಪೈರಸಿ ಮಾಡಿದ ಆರೋಪ ; ದೂರು ದಾಖಲು

ತುಳು ಚಿತ್ರ ಪೈರಸಿ ಮಾಡಿದ ಆರೋಪ ; ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

ನಿಶಾನ್ ವರುಣ್ ಮೂವೀಸ್ ಸಂಸ್ಥೆಯು ನಿರ್ಮಿಸಿದ ‘ಪೆಪ್ಪೆರೆರೆ ಪೆರೆರೆರೆ’ ಎಂಬ ತುಳು ಚಲನಚಿತ್ರವನ್ನು ಯು-ಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದ ‘ತುಳು ಸೂಪರ್ ಕಾಮಿಡಿ 2.0’ ವಿರುದ್ಧ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಚಲನಚಿತ್ರವನ್ನು ತುಳು ಸೂಪರ್ ಕಾಮಿಡಿ 2.0 ಎಂಬ ಯ್ಯೂಟ್ಯೂಬ್ ಚಾನಲ್‌ರವರು ಪೈರಸಿ ಮಾಡಿ ಮತ್ತು ಚಲನಚಿತ್ರದ ತಯಾರಕ ನಿಶಾನ್ ವರುಣ್ ಮೂವೀಸ್ ಸಂಸ್ಥೆಯ ಅನುಮತಿ ಪಡೆಯದೆ ಪ್ರಸಾರ ಮಾಡಿ ನಿಶಾನ್ ವರುಣ್ ಮೂವೀಸ್ ಸಂಸ್ಥೆಯವರಿಗೆ ಮೋಸ ಮಾಡಿ ನಷ್ಟ ಉಂಟು ಮಾಡಿದ್ದಾರೆ ಎಂದು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ. ತುಳು ಸೂಪರ್ ಕಾಮಿಡಿ 2.0′ ಯ್ಯೂಟ್ಯೂಬ್ ಚಾನಲ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಸ್ಥೆಯು ಒತ್ತಾಯಿಸಿದೆ.  

ಸುಮಾರು₹ 1 ಕೋಟಿಗೂ ಹೆಚ್ಚಿನ ಮೊತ್ತದ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿ ಒ.ಟಿ.ಟಿ ವೇದಿಕೆಗಳಲ್ಲಿ ಪ್ರಸಾರ ಮಾಡಿದ್ದೇವೆ. ಈ ತುಳು ಚಲನಚಿತ್ರವನ್ನು ನಿಶಾನ್ ವರುಣ್ ಮೂವೀಸ್ ಸಂಸ್ಥೆಯವರ ಅನುಮತಿ ಪಡೆಯದೆಯೇ ‘ತುಳು ಸೂಪರ್ ಕಾಮಿಡಿ 2.0′ ಯ್ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರ ಮಾಡಲಾಗಿದೆ. ಇದರಿಂದ ನಷ್ಟ ಉಂಟಾಗಿದೆ’ ಎಂದು ಚಲನಚಿತ್ರದ ನಿರ್ಮಾಣ ಮಾಡಿದ ನಿಶಾನ್ ವರುಣ್ ಮೂವೀಸ್ ಸಂಸ್ಥೆಯವರು ಪೊಲಿಸರಿಗೆ ದೂರು ನೀಡಿದ್ದಾರೆ.