Home Education ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗೆ ವಾಮಾಚಾರದ ಕರಿನೆರಳು ; ಕಿಡಿಗೇಡಿಗಳು ಮಾಡಿದ್ದೇನು ಗೊತ್ತೆ !

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗೆ ವಾಮಾಚಾರದ ಕರಿನೆರಳು ; ಕಿಡಿಗೇಡಿಗಳು ಮಾಡಿದ್ದೇನು ಗೊತ್ತೆ !

Hindu neighbor gifts plot of land

Hindu neighbour gifts land to Muslim journalist

ರಾಜ್ಯಾದ್ಯಾಂತ ಎಸ್ಸೆಸ್ಸೆಲ್ಸಿ ಎಕ್ಸಾಂ ಆರಂಭಗೊಂಡಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಜೀವನದ ಮೊದಲ ಘಟ್ಟ ಎಂದು ಜನ ಪರಿಗಣಿಸುತ್ತಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂಕ ಬಹಳ ಮುಖ್ಯ. ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳ ಚಿತ್ತ ಶಾಂತರೀತಿಯಲ್ಲಿರಬೇಕು . ಆದರೆ ಇಲ್ಲೊಂದೆಡೆ ಕಿಡಿಗೇಡಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಯೊಬ್ಬನ ಫೊಟೋ ಇಟ್ಟು ತಿಥಿ ರೂಪದ ವಾಮಾಚಾರ ಮಾಡಿದ್ದಾರೆ. ಈ ದೃಶ್ಯ ಕಂಡ ಸ್ಥಳೀಯರು ಆತಂಕಗೊಂಡಿದ್ದಾರೆ. ವಿಧ್ಯಾರ್ಥಿ ಬೆಚ್ಚಿ ಬಿದ್ದಿದ್ದಾನೆ.

ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಒಂದರಲ್ಲಿ
ವಿದ್ಯಾರ್ಥಿಯ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ಟೆಂಗಿನಕಾಯಿ ಒಡೆದು, ಗಡಿಗೆ ಇಟ್ಟು, ಹಾಲ್ ಟಿಕೆಟ್ ಝರಾಕ್ಸ್ ಪ್ರತಿ ಇಟ್ಟು ಕಿಡಿಗೇಡಿಗಳು ತಿಥಿ ರೂಪದ ವಾಮಾಚಾರ ಮಾಡಿದ್ದಾರೆ.

ಘಟನೆಯಿಂದ ವಿದ್ಯಾರ್ಥಿ ಭಯಗೊಂಡಿದ್ದಾನೆ. ಪೋಷಕರು ಸಹ ಆತಂಕಗೊಂಡಿದ್ದು, ತಮ್ಮ ಮಗನ ಪೋಟೋ ಇಟ್ಟು ಈ ರೀತಿ ದುಷ್ಕೃತ್ಯವೆಸಗಿದವರ ಪತ್ತೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಆದರೆ ಘಟನೆಯ ಆತಂಕದಲ್ಲೇ ಪರೀಕ್ಷೆ ಬರೆಯಲು ವಿದ್ಯಾರ್ಥಿ ತೆರಳಿದ್ದಾನೆ. ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ‌.