Home Education SSLC ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ಬರೆದ ಪುಷ್ಪ ಸಿನಿಮಾದ ಡೈಲಾಗ್ ವೈರಲ್!

SSLC ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ಬರೆದ ಪುಷ್ಪ ಸಿನಿಮಾದ ಡೈಲಾಗ್ ವೈರಲ್!

Hindu neighbor gifts plot of land

Hindu neighbour gifts land to Muslim journalist

ಟಾಲಿವುಡ್ ನ ದಿ ಸೂಪರ್ ಹಿಟ್ ಸಿನಿಮಾ ‘ಪುಷ್ಪ: ದಿ ರೈಸ್’ ಬ್ಲಾಕ್ ಬ್ಲಸ್ಟರ್ ಆಗಿದ್ದು ಎಲ್ಲರಿಗೂ ತಿಳಿದ ವಿಷಯ. ಈ ಸಿನಿಮಾದ ಒಂದು ಡೈಲಾಗ್ ಎಲ್ಲರ ಬಾಯಲ್ಲಿ ಹರಿದಾಡುತ್ತಿತ್ತು. ಅದುವೇ ‘ ಪುಷ್ಪ ಪುಷ್ಪರಾಜ್ ಜುಕೇಗಾ ನಹೀ’. ಈ ಸಿನಿಮಾದ ದ ಡೈಲಾಗ್ ಅನ್ನು ವಿದ್ಯಾರ್ಥಿಯೊಬ್ಬ ಎಕ್ಸಾಂನಲ್ಲಿ ಬರೆದಿರುವುದು ಈಗ ಸಖತ್ ವೈರಲ್ ಆಗಿದೆ. ಹೌದು, ಬೋರ್ಡ್ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿ ತನ್ನ ಪ್ರತಿಯಲ್ಲಿ ಉತ್ತರವನ್ನು ಬರೆಯುವ ಬದಲು ಈ ಚಿತ್ರದ ಸಂಭಾಷಣೆಯನ್ನು ಬರೆದಿದ್ದಾನೆ.

ಪಶ್ಚಿಮ ಬಂಗಾಳದ SSLC ಪರೀಕ್ಷೆ ನಡೆದಿದೆ. ಈಗ ಪ್ರತಿಯ ಮೌಲ್ಯಮಾಪನ ನಡೆಯುತ್ತಿದೆ. ಈ ವೇಳೆ ಶಿಕ್ಷಕರೊಬ್ಬರು ಮೌಲ್ಯಮಾಪನ ಮಾಡಿದ ವೇಳೆಯಲ್ಲಿ ವಿದ್ಯಾರ್ಥಿ ಒಬ್ಬ ಪುಷ್ಪಾ ಸಂಭಾಷಣೆ ಬರೆದಿದ್ದಾನೆ. ‘ ಪುಷ್ಪ, ಪುಷ್ಪರಾಜ್.. ಅಪುನ್ ಲಿಖೇಗಾ ನಹಿ’ ಎಂದು ಬರೆದಿದ್ದು ನಾನು ಪರೀಕ್ಷೆ ಬರೆಯೋದೇ ಇಲ್ಲ ಎಂಬುದು ಅದರರ್ಥವಾಗಿದೆ.

ವಿದ್ಯಾರ್ಥಿ ನೀಡಿದ ಉತ್ತರವನ್ನು ಓದಿದ ಶಿಕ್ಷಕರೂ ಆಶ್ಚರ್ಯಚಕಿತರಾಗಿದ್ದಾರೆ, ಆದರೆ ಪ್ರತಿಯಲ್ಲಿನ ಪ್ರಶ್ನೆಗಳಿಗೆ ವಿದ್ಯಾರ್ಥಿ ಉತ್ತರಿಸಿದ್ದಾನಾ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಆತನ ಪುಷ್ಪಾ ಡೈಲಾಗ್ ಜಗಜ್ಜಾಹೀರು ಆಗಿದ್ದು, ಸಿನಿಮಾ ಓಡಿದ ವೇಗದಲ್ಲೇ ವೈರಲ್ ಆಗಿ ‘ ರುಕೆಗಾ ನಹಿ’ ಅನ್ನುತ್ತಾ ಓಡುತ್ತಿದೆ.