Home Education Education News: ಈ ವರ್ಷ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮಹತ್ವದ ಮಾಹಿತಿ!

Education News: ಈ ವರ್ಷ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮಹತ್ವದ ಮಾಹಿತಿ!

Students Study Tour

Hindu neighbor gifts plot of land

Hindu neighbour gifts land to Muslim journalist

1st standard school admission age limit in karnataka: ಶಾಲಾ ಶಿಕ್ಷಣ ಇಲಾಖೆ 2025-26 ನೇ ಶೈಕ್ಷಣಿಕ ಶಾಲೆಗೆ ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ ಮಾಡಿದೆ. ಉಳಿದಂತೆ ಪೂರ್ವ ಪ್ರಾಥಮಿಕ ಪ್ರವೇಶಕ್ಕೆ ಕಳೆದ ವರ್ಷದ ವಯೋಮತಿ ಅನುಸರಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಲಾಗಿದೆ. ಈ ಕುರಿತು ಶಿಕ್ಷಣ ಅಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರಿಗೆ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಸೂಚನೆ ನೀಡಿದ್ದಾರೆ.

2023-24ರಿಂದಲೇ ಎಲ್‌ಕೆಜಿ ಸೇರ್ಪಡೆಗೆ 4 ವರ್ಷ ತುಂಬಿರಬೇಕು ಎನ್ನುವ ನಿಯಮವಿದೆ. ಯುಕೆಜಿಗೆ 5 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಪೂರ್ವ ಪ್ರಾಥಮಿಕ ಶಾಲೆಗೆ ಈ ನಿಯಮಗಳನ್ನು ಪಾಲಿಸದೆ ಬೇಕಾಬಿಟಿ ಪ್ರವೇಶ ಮಾಡುತ್ತಿರುವುದರಿಂದ ಈ ವರ್ಷ ಗೊಂದಲ ಉಂಟಾಗಿ ಪೋಷಕರು ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರಿ ಈ ವರ್ಷದಿಂದ ಜಾರಿಯಾಗಬೇಕಿದ್ದ ಒಂದನೇ ತರಗತಿಗೆ ಜೂನ್‌ ಒಂದಕ್ಕೆ ಆರು ವರ್ಷ ತುಂಬಿರಬೇಕು ಎಂಬ ನಿಯಮವನ್ನು ಸಡಿಲಗೊಳಿಸಿದ್ದಾರೆ.

5.5 ವರ್ಷ ತುಂಬಿರುವ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸದ ಮಕ್ಕಳು ಒಂದನೇ ತರಗತಿ ಪ್ರವೇಶಕ್ಕೆ ಅವಕಾಶಕ್ಕೆ ಸರಕಾರ ಈ ವರ್ಷಕ್ಕೆ ಅನುವು ಮಾಡಿದೆ. ಆದರೆ ಕೆಲವೊಂದು ಪೂರ್ವ ಪ್ರಾಥಮಿಕ ಶಾಲೆಗಳು ಮತ್ತು ಪೋಷಕರು ಜೂನ್‌ 1 ಕ್ಕೆ ನಾಲ್ಕು ವರ್ಷ ತುಂಬಿರದ ಮಕ್ಕಳನ್ನು ಎಲ್‌ಕೆಜಿಗೆ ದಾಖಲು ಮಾಡುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ, ಶಿಕ್ಷಣ ಇಲಾಖೆ ಶಾಲಾ ಮಕ್ಕಳ ದಾಖಲಾತಿಗೆ ವಯೋಮಿತಿ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.