Home Education UGC-NET: ಅಭ್ಯರ್ಥಿಗಳೇ ಗಮನಿಸಿ, UGC- NET ಪರೀಕ್ಷೆಯ ದಿನಾಂಕ ಪ್ರಕಟ !! ನಿಮ್ಮ ಪರೀಕ್ಷೆ ಯಾವಾಗಿದೆ...

UGC-NET: ಅಭ್ಯರ್ಥಿಗಳೇ ಗಮನಿಸಿ, UGC- NET ಪರೀಕ್ಷೆಯ ದಿನಾಂಕ ಪ್ರಕಟ !! ನಿಮ್ಮ ಪರೀಕ್ಷೆ ಯಾವಾಗಿದೆ ಗೊತ್ತಾ?

UGC-NET

Hindu neighbor gifts plot of land

Hindu neighbour gifts land to Muslim journalist

UGC-NET: ನ್ಯಾಷನಲ್ ಟೆಸ್ಟಿಂಗ್‌ ಏಜೆನ್ಸಿ ಎನ್‌ಟಿಎ’ಯು(NTA) 2023 ಡಿಸೆಂಬರ್ ಸೆಷನ್‌ ಯುಜಿಸಿ(UGC) ಎನ್‌ಇಟಿ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಿದೆ. ಹೀಗಾಗಿ ಪರೀಕ್ಷೆಯ ದಿನಾಂಕಗಳಿಗೆ ಕುತೂಹಲದಿಂದ ಕಾದಿದ್ದ ವಿದ್ಯಾರ್ಥಿಗಳ ಕುತೂಹಲ ತಣಿದಿದೆ.

ಹೌದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NET) ಈ ವರ್ಷದ ಡಿಸೆಂಬರ್ ಸೆಷನ್ ನ ಯುಜಿಸಿ ಎನ್ ಇ ಟಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ. ಈ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಎನ್ಟಿಎ ನಡೆಸಲಿರುವ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

UGC-NET ಪರೀಕ್ಷೆ ಯಾವಾಗ?

ಈ ಸಲದ ಡಿಸೆಂಬರ್ ಅವಧಿಯ NET ಪರೀಕ್ಷೆಗಳು ಡಿಸೆಂಬರ್ 6 ರಿಂದ ಡಿಸೆಂಬರ್ 22 ವರೆಗೆ ನಡೆಯಲಿದೆ. ಸದ್ಯದಲ್ಲೇ ಇದರ ಅಪ್ಲಿಕೇಶನ್ ಕೂಡ ತೆರೆಯಲಾಗುವುದು ಎಂದು ಮಾಹಿತಿ ನೀಡಿದೆ. ಅಲ್ಲದೆ ಪರಿಕ್ಷಾವಾರು ದಿನಾಂಕಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. ಇನ್ನು ಯುಜಿಸಿ ಎನ್‌ಇಟಿ ಪರೀಕ್ಷೆ ಬರೆಯಲು ಉತ್ಸುಕರಾಗಿರುವವರು ನೋಟಿಫಿಕೇಶನ್‌ ಚೆಕ್‌ ಮಾಡಲು ugcnet.nta.nic.in ಗೆ ಭೇಟಿ ನೀಡಿ, ಡಿಸೆಂಬರ್ ಸೆಷನ್‌ ಯುಜಿಸಿ ಎನ್‌ಇಟಿ ಕುರಿತು ಲೇಟೆಸ್ಟ್‌ ಮಾಹಿತಿ ತಿಳಿಯಬಹುದು. ಶೀಘ್ರದಲ್ಲೇ ಪರೀಕ್ಷೆ ಕುರಿತು ಇನ್ಫಾರ್ಮೇಶನ್‌ ಬುಲೆಟಿನ್‌ ಅನ್ನು ಎನ್‌ಟಿಎ ಪ್ರಕಟಿಸುವ ಸಾಧ್ಯತೆ ಇದೆ.

UGC-NET

ಏನಿದು UGC-NET ಪರೀಕ್ಷೆ ?
ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ಗಳಿಗಾಗಿ ಯುಜಿಸಿ ನೆಟ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ನೀವು ಪಿಎಚ್ಡಿಗೆ ನೋಂದಾಯಿಸಿಕೊಳ್ಳಬಹುದು. ಈ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಮೊದಲ ಪರೀಕ್ಷೆಯನ್ನು ಮೇ-ಜೂನ್ ನಲ್ಲಿ ನಡೆಸಲಾಗುತ್ತದೆ. ಅದೇ ಸಮಯದಲ್ಲಿ, ಎರಡನೇ ಪರೀಕ್ಷೆಯನ್ನು ಡಿಸೆಂಬರ್-ಜನವರಿಯಲ್ಲಿ ನಡೆಸಲಾಗುತ್ತದೆ.ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗುತ್ತಾರೆ. ಹೊಸ ಶಿಕ್ಷಣ ನೀತಿ 2020 ರ ಪ್ರಕಾರ, ಯುಜಿಸಿ ನೆಟ್ ಉತ್ತೀರ್ಣತೆಯನ್ನು ಸಹಾಯಕ ಪ್ರಾಧ್ಯಾಪಕರ ಕನಿಷ್ಠ ಅರ್ಹತೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Plastic water bottel ban: ಪ್ಲಾಸ್ಟಿಕ್ ನೀರಿನ ಬಾಟ್ಲಿ ಕುರಿತು ಬಂತು ಹೊಸ ರೂಲ್ಸ್- ರಾತ್ರೋ ರಾತ್ರಿ ಹೊಸ ಆದೇಶ ಹೊರಡಿಸಿದ ಸರ್ಕಾರ