Home Education 13 ವರ್ಷದ ಬಾಲಕಿಗೆ ಪ್ರೇಮ ಪತ್ರ ಬರೆದ 47ರ ಶಿಕ್ಷಕ!

13 ವರ್ಷದ ಬಾಲಕಿಗೆ ಪ್ರೇಮ ಪತ್ರ ಬರೆದ 47ರ ಶಿಕ್ಷಕ!

Hindu neighbor gifts plot of land

Hindu neighbour gifts land to Muslim journalist

ಗುರುವೆಂದರೆ ವಿದ್ಯಾರ್ಥಿಗಳು ಅಡ್ಡದಾರಿಯನ್ನು ಹಿಡಿಯದಂತೆ ತಿದ್ದಿ, ತೀಡಿ ಸುಂದರ ಬದುಕನ್ನು ರೂಪಿಸಿಕೊಳ್ಳುವಂತೆ ಮಾಡುವವರು. ಆದರೆ ಇಲ್ಲೊಬ್ಬ ಶಿಕ್ಷಕ ತನ್ನ 47 ನೇ ವಯಸ್ಸಿನಲ್ಲಿ 13 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಲ್ಲಾರ್ಪುರದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 47 ವರ್ಷದ ಶಿಕ್ಷಕ ಹರಿ ಓಂ ಸಿಂಗ್ ಎಂಬುವನು ತನ್ನ ಶಾಲೆಯ 8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ 13 ವರ್ಷದ ಬಾಲಕಿಗೆ ಪ್ರೇಮ ಪತ್ರ ಬರೆದು ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡು ಪೇಚಿಗೆ ಸಿಲುಕಿದ್ದಾನೆ.

ಒಂದು ಪುಟದಲ್ಲಿ ವಿದ್ಯಾರ್ಥಿನಿಯ ಹೆಸರಿನೊಂದಿಗೆ ಪ್ರೇಮ ಪತ್ರವನ್ನು ಆರಂಭಿಸಿ, ಆಕೆಯನ್ನು ತುಂಬಾ ಪ್ರೀತಿಸುತ್ತಿರುದ್ದಾಗಿ ತಿಳಿಸಿದ್ದಾನೆ. ರಜಾ ದಿನಗಳಲ್ಲಿ ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿ, ಸಮಯ ಸಿಕ್ಕಾಗಲೆಲ್ಲ ಕರೆ ಮಾಡಲು ತಿಳಿಸಿದ್ದಾನೆ. ಅಲ್ಲದೆ ರಜೆಗೂ ಮುನ್ನ ತನ್ನನ್ನು ಒಮ್ಮೆಯಾದರೂ ಭೇಟಿಯಾಗಲು ಕೋರಿದ್ದಾನೆ. ನನ್ನನ್ನು ನೀನು ಪ್ರೀತಿಸುವುದಾದರೆ ಖಂಡಿತಾ ಬರುತ್ತೀಯ ಎಂದು ಹೇಳಿರುವುದಲ್ಲದೆ, ಪತ್ರವನ್ನು ಓದಿದ ಬಳಿಕ ಯಾರಿಗೂ ಹೇಳದೆ ಹರಿದುಹಾಕಲು ತಿಳಿಸಿದ್ದಾನೆ.

ಪತ್ರದ ಬಗ್ಗೆ ವಿದ್ಯಾರ್ಥಿನಿಯು ತಕ್ಷಣ ತನ್ನ ಪೋಷಕರ ಗಮನಕ್ಕೆ ತಂದಿದ್ದಾಳೆ. ಕೂಡಲೇ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕನು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಆದರೆ ಕ್ಷಮೆ ಕೋರುವ ಬದಲು ಶಿಕ್ಷಕನು ಉದ್ಧಟತನ ತೋರಿ ಪೋಷಕರ ಮೇಲೆ ರೇಗಾಡಿದ್ದಾನೆ. ‘ಇದಕ್ಕೆ ನೀವು ಪರಿಣಾಮ ಎದುರಿಸಬೇಕಾಗುತ್ತದೆ, ಹುಡುಗಿಯನ್ನು ಹುಟ್ಟಲಿಲ್ಲ ಎನ್ನುವಂತೆ ಮಾಡುತ್ತೇನೆ’ ಎಂದು ಬೆದರಿಸಿ ಅವಾಜ್ ಹಾಕಿದ್ದಾನೆ.

ಪೋಷಕರು ಕೂಡಲೆ ಬಾಲಕಿಯನ್ನು ಕರೆದುಕೊಂಡು ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೋಲೀಸರು FIR ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಶಿಕ್ಷಕನನ್ನು ವೃತ್ತಿಯಿಂದ ಅಮಾನತು ಮಾಡಲಾಗಿದೆ. ಅಲ್ಲದೆ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.