Home Death Vittla: ವಿಟ್ಲ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಇರುವತೋಡಿನಲ್ಲಿ ಮೃತದೇಹ ಪತ್ತೆ

Vittla: ವಿಟ್ಲ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಇರುವತೋಡಿನಲ್ಲಿ ಮೃತದೇಹ ಪತ್ತೆ

Hindu neighbor gifts plot of land

Hindu neighbour gifts land to Muslim journalist

Vittla: ವಿಟ್ಲ ಕೆಎಸ್ ಆರ್ ಟಿಸಿ ಬಸ್‌ ನಿಲ್ದಾಣದ ಬಳಿಯ ಮೋರಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿ ಸಮೀಪದ ಕೋಟಿಕೆರೆ ನಿವಾಸಿ ಮಂಜುನಾಥ್ (55) ಎಂದು ಗುರುತಿಸಲಾಗಿದೆ.ಅಡಿಕೆ ಗಾರ್ಬಲಲ್ಲಿ ಕೆಲಸ ಮಾಡುತ್ತಿದ್ದ ಈತ ರವಿವಾರ ರಾತ್ರಿ ಗಂಟೆ 9.30ರ ಅನಂತರ ನಾಪತ್ತೆಯಾಗಿದ್ದರು. ಬೆಳಗ್ಗೆ ಸಾರ್ವಜನಿಕರು ನಡೆದುಕೊಂಡು ಹೋಗುತ್ತಿದ್ದಾಗ ಮೋರಿಯ ಸ್ವಲ್ಪ ನೀರಿನಲ್ಲಿ ಶವ ತೇಲುತ್ತಿರುವುದು ಕಂಡು ಬಂದಿದೆ. ಮೋರಿಗೆ ಬಿದ್ದು ಸಾವನ್ನಪ್ಪಿದ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ.ಮಾಹಿತಿ ತಿಳಿದು ವಿಟ್ಲ ಠಾಣೆ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ಮತ್ತು ಠಾಣಾಧಿಕಾರಿ ರಾಮಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.