Home Crime Youtuber Harsha Sai: ಲೈಂಗಿಕ ಕಿರುಕುಳ, ನಗ್ನ ಫೋಟೋ ಬಳಸಿ ನಟಿಗೆ ಬ್ಲ್ಯಾಕ್‌ಮೇಲ್‌; ಯೂಟ್ಯೂಬರ್‌ ಹರ್ಷಸಾಯಿ...

Youtuber Harsha Sai: ಲೈಂಗಿಕ ಕಿರುಕುಳ, ನಗ್ನ ಫೋಟೋ ಬಳಸಿ ನಟಿಗೆ ಬ್ಲ್ಯಾಕ್‌ಮೇಲ್‌; ಯೂಟ್ಯೂಬರ್‌ ಹರ್ಷಸಾಯಿ ವಿರುದ್ಧ ಬಿತ್ತು ರೇಪ್‌, ವಂಚನೆ ಕೇಸ್‌!

image credit: Cinijosh

Hindu neighbor gifts plot of land

Hindu neighbour gifts land to Muslim journalist

Youtuber Harsha Sai: ಬಡವರಿಗೆ ಸಹಾಯ ಮಾಡುವ ಉದಾತ್ತ ಮನಸ್ಸು ಹೊಂದಿರುವ ತೆಲುಗಿನ ಯೂಟ್ಯೂಬರ್‌, 10 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಹರ್ಷಸಾಯಿ ವಿರುದ್ಧ ಇದೀಗ ಅತ್ಯಾಚಾರ ಎಂಬ ಗಂಭೀರ ಕೇಸ್‌ ಬಿದ್ದಿದೆ.

ಯೂಟ್ಯೂಬರ್‌ ಹರ್ಷಸಾಯಿ ವಿರುದ್ಧ ಹೈದರಾಬಾದ್‌ನ ನರಸಿಂಗಿ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಇದರ ಜೊತೆಗೆ ವಂಚನೆ ಆರೋಪ ಕೂಡಾ ಕೇಳಿ ಬಂದಿದೆ. ಪ್ರೀತಿ ಮತ್ತು ಮದುವೆ ಹೆಸರಿನಲ್ಲಿ ಹರ್ಷಸಾಯಿ ಮೋಸ ಮಾಡಿರುವುದಾಗಿ ನಟಿಯೊಬ್ಬರು ದೂರಿನಲ್ಲಿ ತಿಳಿಸಿದ್ದಾರೆ.

ಅತ್ಯಾಚಾರ ಮಾಡಿರುವುದಲ್ಲದೆ ಎರಡು ಕೋಟಿ ರೂಪಾಯಿ ಹಣ ಪಡೆದು ವಂಚನೆ ಮಾಡಿರುವುದಾಗಿ ಕೂಡಾ ದೂರಿನಲ್ಲಿ ಸಂತ್ರಸ್ತೆ ನಟಿ ತಿಳಿಸಿದ್ದು, ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಮದುವೆಯಾಗುವುದಾಗಿ ನಂಬಿಸಿ ನಗ್ನ ಚಿತ್ರ ತೆಗೆದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಯೂಟ್ಯೂಬರ್‌ ಹರ್ಷಸಾಯಿ ವಿರುದ್ಧ ಕೇಸ್‌ ಆಧರಿಸಿ 328, 376, 354 ಸೇರಿ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.