Home Crime Vittla: ವಿಟ್ಲ: ಎಟಿಎಂ ಕಾರ್ಡ್ ಅದಲು ಬದಲು ಮಾಡಿ ಮಹಿಳೆ ಖಾತೆಯಿಂದ ಲಕ್ಷಕ್ಕೂ ಅಧಿಕ ಹಣ...

Vittla: ವಿಟ್ಲ: ಎಟಿಎಂ ಕಾರ್ಡ್ ಅದಲು ಬದಲು ಮಾಡಿ ಮಹಿಳೆ ಖಾತೆಯಿಂದ ಲಕ್ಷಕ್ಕೂ ಅಧಿಕ ಹಣ ಸ್ವಾಹ

ATM Card Number

Hindu neighbor gifts plot of land

Hindu neighbour gifts land to Muslim journalist

Vittla: ಅಪರಿಚಿತ ವ್ಯಕ್ತಿಗಳಿಬ್ಬರು ಮಹಿಳೆಯೊಬ್ಬರಿಂದ ಎಟಿಎಂ ಕಾರ್ಡ್ ಪಡೆದು ಲಕ್ಷಾಂತರ ರೂ. ವಂಚಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.ವಿಟ್ಲ ಇಡ್ಕಿದು ಗ್ರಾಮದ ಉರಿಮಜಲು ನಿವಾಸಿ ಮಹಿಳೆ ವಿಟ್ಲಕಸಬಾ ಗ್ರಾಮದ ಫಾತಿಮ ಬಿಲ್ಡಿಂಗ್‌ನಲ್ಲಿರುವ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ತೆರಳಿ 6,000 ರೂ. ಡ್ರಾ ಮಾಡಿ ಹೊರಗಡೆ ಬರುತ್ತಿದ್ದ ಸಂದರ್ಭ ಎಟಿಎಂ ಕೇಂದ್ರದ ಒಳಗಡೆಯಿದ್ದ ಅಪರಿಚಿತ ವ್ಯಕ್ತಿಗಳು ಮಹಿಳೆಯನ್ನು ಕರೆದು ಎಟಿಎಂ ಅನ್ನು ಸರಿಯಾಗಿ ಮುಚ್ಚಬೇಕೆಂದು ಹೇಳಿದ್ದಾರೆ. ಅದರಂತೆ ಮಹಿಳೆ ಕೇಂದ್ರದ ಒಳಗೆ ಹೋಗಿ ನೋಡಿ ಹೊರಗಡೆ ಬರುವಾಗ ಅಪರಿಚಿತ ವ್ಯಕ್ತಿಗಳು ಕಾರ್ಡ್ ಬದಲಾಗಿದೆ ಎಂದು ತಿಳಿಸಿ ಮಹಿಳೆಯ ಕೈಯಲ್ಲಿದ್ದ ಕಾರ್ಡನ್ನು ಅದಲು ಬದಲುಗೊಳಿಸಿದ್ದರು. ಮನೆಗೆ ಬಂದು ರಾತ್ರಿ ಮೊಬೈಲ್ ನೋಡುವಾಗ ಖಾತೆಯಲ್ಲಿದ್ದ ಸುಮಾರು 1.19 ಲಕ್ಷ ರೂ. ವರ್ಗಾವಣೆಯಾಗಿರುವ ಬಗ್ಗೆ ಸಂದೇಶ ಬಂದಿದೆ ಎಂದು ವಂಚನೆಗೊಳಗಾದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.