Home Crime Crime: ಆಸ್ತಿಗಾಗಿ ಪತಿಯನ್ನು ಗೃಹಬಂಧನದಲ್ಲಿಟ್ಟ ಪತ್ನಿ

Crime: ಆಸ್ತಿಗಾಗಿ ಪತಿಯನ್ನು ಗೃಹಬಂಧನದಲ್ಲಿಟ್ಟ ಪತ್ನಿ

Crime

Hindu neighbor gifts plot of land

Hindu neighbour gifts land to Muslim journalist

Crime: ಆಸ್ತಿ ವಿವಾದಕ್ಕೆ ಪತ್ನಿಯೇ ಗಂಡನನ್ನು ಗೃಹಬಂಧನಕ್ಕೆ ಒಳಪಡಿಸಿರುವ ಘಟನೆ ಗದಗದ ಬೆಟಗೇರಿ ಗುಲ್ಬರ್ಗಾ ಓಣಿಯಲ್ಲಿ ಬೆಳಕಿಗೆ ಬಂದಿದೆ. 28 ವರ್ಷಗಳಿಂದ ದಾಂಪತ್ಯ ನಡೆಸುತ್ತಿರುವ ಗಜಾನನಸಾ ಬಸವ ಎನ್ನುವವರು ಮನೆಯ ಒಂದು ಕೋಣೆಯಲ್ಲಿ 15 ದಿನಗಳಿಂದ ಬಂಧಿಯಾಗಿದ್ದರು. ಗಜಾನನ ಹಾಗೂ ಪತ್ನಿ ಶೋಭಾ ನಡುವೆ ಆಸ್ತಿ ಹಂಚಿಕೆ ವಿಷಯದಲ್ಲಿ ಹಲವು ವರ್ಷಗಳಿಂದ ಕಲಹ ನಡೆಯುತ್ತಿತ್ತು. ಗಂಡ ಆಸ್ತಿಯನ್ನು ಸಹೋದರಿಗೆ ನೋಂದಣಿ ಮಾಡಿಸಬಹುದು ಎಂಬ ಅನುಮಾನದಿಂದ ಶೋಭಾ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಕೆಲಸ ಮಾಡುತ್ತಿದ್ದ ಗಜಾನನ ಕೆಲವು ದಿನಗಳಿಂದ ಕೆಲಸಕ್ಕೆ ಬಾರದಿದ್ದುದರಿಂದ ಅಕ್ಕಪಕ್ಕದವರಿಗೆ ಅನುಮಾನ ಮೂಡಿತ್ತು. ಮನೆಯಲ್ಲಿ ಬೆಳವಣಿಗೆ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಗುರುವಾರ ಪೊಲೀಸರು ಮನೆಗೆ ಭೇಟಿ ನೀಡಿದಾಗ ಗಜಾನನ ಒಬ್ಬಂಟಿಯಾಗಿ ಬಂಧಿಯಾಗಿರುವುದು ಬಹಿರಂಗವಾಯಿತು.“15 ದಿನಗಳಿಂದ ಕೂಡಿ ಹಾಕಿದ್ದಾರೆ. ಸರಿಯಾಗಿ ಊಟ ಕೊಡುವುದಿಲ್ಲ. ಶಾಲೆಯ ಬಿಸಿಯೂಟ ತಿನ್ನಿಸ್ತಿದ್ದಾರೆ” ಎಂದು ಗಜಾನನ ಪೊಲೀಸರಿಗೆ ತಿಳಿಸಿದ್ದಾರೆ.ಪೊಲೀಸರು ಹಾಗೂ ಮಾಧ್ಯಮಗಳು ಮನೆಗೆ ಬಂದ ಕೂಡಲೇ ಪತ್ನಿ ಶೋಭಾ, ಗಂಡನಿಗೆ ಮಾನಸಿಕ ಅಸ್ವಸ್ಥತೆ ಇದೆ, ಆಸ್ತಿಯನ್ನು ಸಹೋದರಿಗೆ ನೀಡಬಹುದು ಎಂಬ ಶಂಕೆಯಿಂದ ಗೃಹಬಂಧನ ಮಾಡಿದ್ದೇವೆ ಎಂದು ಶೋಭಾ ಸಮರ್ಥಿಸಿಕೊಂಡಿದ್ದಾಳೆ.ಬೆಟಗೇರಿ ಪೊಲೀಸರು ಗಜಾನನನನ್ನು ಗೃಹಬಂಧನದಿಂದ ಬಿಡಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದು, ಶೋಭಾ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.