Home Crime Vitla: ಮದ್ಯ ಸೇವಿಸಿ ಹಾವು ಹಿಡಿದು ಮಲಗಿದ ಯುವಕ – ಹಾವು ಕಡಿದು ಮಲಗಿದಲ್ಲೇ ಸಾವು

Vitla: ಮದ್ಯ ಸೇವಿಸಿ ಹಾವು ಹಿಡಿದು ಮಲಗಿದ ಯುವಕ – ಹಾವು ಕಡಿದು ಮಲಗಿದಲ್ಲೇ ಸಾವು

Hindu neighbor gifts plot of land

Hindu neighbour gifts land to Muslim journalist

Vitla ಸಮೀಪದ ಮಂಗಳಪದವು ಮಾಮೇಶ್ವರದಲ್ಲಿ ವಿಷಪೂರಿತ ಹಾವು ಕಚ್ಚಿ ಪೆರುವಾಯಿ ಯುವಕ ರವಿವಾರ ರಾತ್ರಿ ಮೃತಪಟ್ಟಿದ್ದಾನೆ.

ಪೆರುವಾಯಿಯ ಸುರೇಶ್ ನಾಯ್ಕ(40) ಮೃತರು ಎಂದು ಗುರುತಿಸಲಾಗಿದೆ. ಮದ್ಯ ಸೇವನೆಯ ಚಟ ಹೊಂದಿದ್ದ ಸುರೇಶ್ ನಾಯ್ಕ ಪೆರುವಾಯಿಯಲ್ಲಿರುವ ತನ್ನ ಮನೆಗೆ ಹೋಗದೆ ಮಾಮೇಶ್ವರದಲ್ಲಿ ಗೆಳೆಯನ ಮನೆಯಲ್ಲಿ ವಾಸವಿದ್ದರು.

ಪಕ್ಕದ ಮನೆಗೆ ಹಾವೊಂದು ಬಂತು ಎಂಬ ಕೂಗು ಕೇಳಿ ಅಲ್ಲಿಗೆ ಧಾವಿಸಿದ ಸುರೇಶ್‌ ಹಾವನ್ನು ಬರಿಗೈಯಲ್ಲಿ ಹಿಡಿದಿದ್ದರು. ಈ ವೇಳೆ ಅದು ಕಚ್ಚಿದ್ದರೂ ಚಿಕಿತ್ಸೆ ಮಾಡದೇ ಕಂಠಪೂರ್ತಿ ಕುಡಿದು ಮಲಗಿದ್ದಾನೆ ಎಂದು ತಿಳಿದುಬಂದಿದ್ದು, ಮಲಗಿದಲ್ಲೇ ರವಿವಾರ ರಾತ್ರಿ ಮೃತಪಟ್ಟಿರುವುದಾಗಿ ದೂರಲಾಗಿದೆ.