Home Crime Uppinangady: ಉಪ್ಪಿನಂಗಡಿ: ಖೋಟಾ ನೋಟು ದಂಧೆ: ಆರೋಪಿ ಅರೆಸ್ಟ್!

Uppinangady: ಉಪ್ಪಿನಂಗಡಿ: ಖೋಟಾ ನೋಟು ದಂಧೆ: ಆರೋಪಿ ಅರೆಸ್ಟ್!

Hindu neighbor gifts plot of land

Hindu neighbour gifts land to Muslim journalist

Uppinangady: ಖೋಟಾ ನೋಟು ದಂಧೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬಂಟ್ವಾಳ ನಿವಾಸಿಯೋರ್ವನನ್ನು ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ವಾರಂಟ್ ಜ್ಯಾರಿ ಸಿಬ್ಬಂದಿಗಳು ಆ.25ರಂದು ಉಪ್ಪಿನಂಗಡಿ (Uppinangady) ಬಳಿಯ ವಲಾಲು ಎಂಬಲ್ಲಿ ಬಂಧಿಸಿದ್ದಾರೆ.

ಆರೋಪಿಯು ಬಂಟ್ವಾಳ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ನಿಜಾಮ್(33.ವ) ಎಂಬುವವನಾಗಿದ್ದು, ಈತನ ಮೇಲೆ 2023 ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 01/2023 ಕಲಂ 489 (ಬಿ) ಮತ್ತು (ಸಿ) ಜೊತೆಗೆ 34 ಭಾ.ದಂ.ಸಂ. ರಂತೆ ಪ್ರಕರಣ ದಾಖಲಾಗಿ ನ್ಯಾಯಲಯದಲ್ಲಿ ವಿಚಾರಣೆಯಲ್ಲಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದು ನಂತರ ಪ್ರಕರಣಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ನ್ಯಾಯಾಲಯವು ಈತನ ಮೇಲೆ 08 ಬಾರಿ ಬಂಧನ ವಾರಂಟ್ ಹೊರಡಿಸಿತ್ತು, ಆ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಈಗ ಪೊಲೀಸರು ಬಂಧಿಸಿ, ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.