Home Crime Udupi: ಸಿಎಂ ಸಿದ್ದರಾಮಯ್ಯ ಕೊಂದರೆ ಹಿಂದುಗಳಿಗೆ ನೆಮ್ಮದಿ ಪೋಸ್ಟ್‌ ಮಾಡಿದ ಉಡುಪಿಯ ಯುವಕನ ಬಂಧನ!

Udupi: ಸಿಎಂ ಸಿದ್ದರಾಮಯ್ಯ ಕೊಂದರೆ ಹಿಂದುಗಳಿಗೆ ನೆಮ್ಮದಿ ಪೋಸ್ಟ್‌ ಮಾಡಿದ ಉಡುಪಿಯ ಯುವಕನ ಬಂಧನ!

Hindu neighbor gifts plot of land

Hindu neighbour gifts land to Muslim journalist

Udupi: ಮೇ 2 ರಂದು ಸಂಪು ಸಾಲಿನ್‌ (ಸಂಪು ಎಸ್‌ ಸಾಣೂರು) ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಸಂದೇಶ ಹಾಕಿ ಬೆಂಗಳೂರು ಹೋಮ್‌ಗಾರ್ಡ್‌ ಕಚೇರಿಯ ಉದ್ಯೋಗಿ ಸಂಪತ್‌ ಸಾಲಿಯಾನ್‌ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯನನ್ನು ಕೊಂದರೆ ಹಿಂದುಗಳಿಗೆ ನೆಮ್ಮದಿ ಎನ್ನುವ ಪೋಸ್ಟನ್ನು ಶೇರ್‌ ಮಾಡಿ ದ್ವೇಷ ಭಾವನೆ ಹರಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ಆರೋಪದ ಮೇಲೆ ಈತನ ಬಂಧನವಾಗಿದೆ.

ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಸೂರಜ್‌ ಕುಕ್ಕುಂದೂರು ಎಂಬುವವರು ದೂರಿ ನೀಡಿದ್ದು, ಪ್ರಕರಣ ದಾಖಲು ಮಾಡಲಾಗಿತ್ತು.