Home Crime Hit and Run: ರಸ್ತೆ ಬದಿ ನಿಂತಿದ್ದಾಗ ಕಾರು ಡಿಕ್ಕಿ; 10 ಮೀಟರ್ ದೂರ ಎಸೆಯಲ್ಪಟ್ಟ...

Hit and Run: ರಸ್ತೆ ಬದಿ ನಿಂತಿದ್ದಾಗ ಕಾರು ಡಿಕ್ಕಿ; 10 ಮೀಟರ್ ದೂರ ಎಸೆಯಲ್ಪಟ್ಟ ಶಿಕ್ಷಕ; ಸ್ಥಳದಲ್ಲೇ ಸಾವು 

Hindu neighbor gifts plot of land

Hindu neighbour gifts land to Muslim journalist

Hit and Run: ತಮಿಳುನಾಡಿನ ಸೇಲಂನಲ್ಲಿ ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖಾಸಗಿ ಶಾಲೆಯ ಶಿಕ್ಷಕ ಮತ್ತು ಶಿಕ್ಷಕಿಯೊಂದಿಗೆ ಬೈಕ್‌ನಲ್ಲಿ ಬಂದು, ಗಾಡಿಯಿಂದ ಕೆಳಗಿಳಿದ ಬಳಿಕ ಮಾತನಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದರಿಂದ ಬೈಕ್ ಸಮೇತ ವ್ಯಕ್ತಿ ಸುಮಾರು 10 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದಾನೆ. ಘಟನೆಯಲ್ಲಿ ಶಿಕ್ಷಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಆಘಾತಕಾರಿ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ..

ಶಿಕ್ಷಕ ರಸ್ತೆಬದಿಯಲ್ಲಿ ಮಹಿಳೆಯೊಂದಿಗೆ ನಿಂತಿದ್ದಾಗ ಹಿಂದಿನಿಂದ ಅತಿ ವೇಗದಲ್ಲಿ ಬಂದ ಕಾರು ಕೆಲವೇ ಕ್ಷಣಗಳಲ್ಲಿ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ವಾಹನದ ಚಾಲಕನ ನಿಯಂತ್ರಣ ತಪ್ಪಿದೆ ಎಂದು ವರದಿಯಾಗಿದೆ. ಶಿಕ್ಷಕ ಹಲವಾರು ಮೀಟರ್‌ಗಳಷ್ಟು ಗಾಳಿಯಲ್ಲಿ ಹಾರಿದ್ದರು. ಶಿಕ್ಷಕರೊಂದಿಗೆ ಇದ್ದ ಮಹಿಳೆ ಅವರ ಕಡೆಗೆ ಧಾವಿಸಿದರು. ಆದರೆ, ಚಾಲಕ ಕಾರನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.