Home Crime ತಹಸೀಲ್ದಾರ್ ಮೇಲೆ ಹಲ್ಲೆ; ಯೂಟ್ಯೂಬರ್ ಬಂಧನ

ತಹಸೀಲ್ದಾರ್ ಮೇಲೆ ಹಲ್ಲೆ; ಯೂಟ್ಯೂಬರ್ ಬಂಧನ

Crime

Hindu neighbor gifts plot of land

Hindu neighbour gifts land to Muslim journalist

ಗದಗ: ರೋಣ ತಾಲೂಕು ತಹಸೀಲ್ದಾ‌ರ್ ನಾಗರಾಜ ಕೆ. ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಹನುಮಂತ ಚಲವಾದಿಯನ್ನು ಬಂಧಿಸಲಾಗಿದೆ. ಜನವರಿ 25ರ ಮಧ್ಯರಾತ್ರಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹನುಮಂತ ಚಲವಾದಿ ಮತ್ತು ಶರಣಪ್ಪ ಎನ್ನುವವರ ವಿರುದ್ಧ ತಹಸೀಲ್ದಾರ್‌ ದೂರು ನೀಡಿದ್ದರು.

“ಯುಟ್ಯೂಬ್ ಪತ್ರಕರ್ತನೆಂದು ಹೇಳಿಕೊಳ್ಳುವ ಹನುಮಂತ ಚಲವಾದಿ, ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿದ್ದ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯಿಂದ ತಹಸೀಲ್ದಾ‌ರ್ ನಾಗರಾಜ್ ಕೆ. ಅವರು ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದ್ದರು. ಈ ಮುಚ್ಚಳಿಕೆಯನ್ನು ರದ್ದು ಮಾಡಲು ಒತ್ತಾಯಿಸಿದ ಆರೋಪಿ ಹನುಮಂತ ಜ. 25ರ ಮಧ್ಯರಾತ್ರಿ ಅತಿಕ್ರಮವಾಗಿ ತಹಸೀಲ್ದಾರ್ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ ತಿಳಿಸಿದ್ದಾರೆ.