Home Crime Stabbing: ಬಸ್‌ನ ಕಿಟಕಿ ಸೀಟ್‌ ಕೊಡದಕ್ಕೆ ಚೂರಿ ಇರಿತ – ವಿದ್ಯಾರ್ಥಿಗೆ ಚೂರಿ ಇರಿದ ಅಪರಿಚಿತರು

Stabbing: ಬಸ್‌ನ ಕಿಟಕಿ ಸೀಟ್‌ ಕೊಡದಕ್ಕೆ ಚೂರಿ ಇರಿತ – ವಿದ್ಯಾರ್ಥಿಗೆ ಚೂರಿ ಇರಿದ ಅಪರಿಚಿತರು

Hindu neighbor gifts plot of land

Hindu neighbour gifts land to Muslim journalist

Stabbing: ಬಸ್‌ನ ಕಿಟಕಿ ಸೀಟ್‌ ಬಿಟ್ಟುಕೊಡದ ಹಿನ್ನೆಲೆ ಕಾಲೇಜು ವಿದ್ಯಾರ್ಥಿಗೆ ಚಾಕು ಇರಿದ ಘಟನೆ ಇಂದು ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ವಿದ್ಯಾರ್ಥಿಗೆ ಚೂರಿ ಇರಿದು ಅಪರಿಚಿತ ಯುವಕರು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಗಾವಿ ತಾಲೂಕಿನ ಪಂತ ಬಾಳೇಕುಂದ್ರಿ ಗ್ರಾಮದ ಮಾಂಜ್ ಸನಧಿ (20) ಎಂಬಾತ ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿ. ಕಿಟಕಿ ಸೀಟ್‌ಗಾಗಿ ವಿದ್ಯಾರ್ಥಿ ಮತ್ತು ಯುವಕರ ಮಧ್ಯೆ ಗಲಾಟೆ ನಡೆದಿದೆ. ಇದು ವಿಕೋಪಕ್ಕೆ ತಿರುಗುತ್ತಿದ್ದಂತೆ ಚೂರಿ ಇರಿದು ಯುವಕರ ಗುಂಪು ಪರಾರಿಯಾಗಿದೆ. ತೀವ್ರ ಗಾಯಗೊಂಡ ವಿದ್ಯಾರ್ಥಿ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.