Home Crime CRIME: ವಿದ್ಯಾರ್ಥಿನಿ ಮೇಲೆ ಅ*ತ್ಯಾಚಾರ ಪ್ರಕರಣ: ಬಿಜೆಪಿ ಕಾರ್ಯಕರ್ತನಿಗೆ ಜೀವಾವಧಿ ಶಿಕ್ಷೆ!

CRIME: ವಿದ್ಯಾರ್ಥಿನಿ ಮೇಲೆ ಅ*ತ್ಯಾಚಾರ ಪ್ರಕರಣ: ಬಿಜೆಪಿ ಕಾರ್ಯಕರ್ತನಿಗೆ ಜೀವಾವಧಿ ಶಿಕ್ಷೆ!

Hindu neighbor gifts plot of land

Hindu neighbour gifts land to Muslim journalist

CRIME: ಪಲತಾಯಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ (Crime) ಎಸಗಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ಶಿಕ್ಷಕನಾಗಿದ್ದ ಕಡವತ್ತೂರಿನ ನಿವಾಸಿ ಪಪ್ಪೆನ್ ಮಾಸ್ಟರ್ ಅಥವಾ ಪದ್ಮರಾಜನ್ ಕೆ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಆತನ್ನ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಭಾನುವಾರ ಮಾಹಿತಿ ನೀಡಿದ್ದಾರೆ.

ತಲಕ್ಕೇರಿ ಫಾಸ್ಟ್ ಟ್ರ್ಯಾಕ್‌ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜಲರಾಜನಿ ಎಂಟಿ ಅವರು ನವೆಂಬರ್ 15 ರಂದು ವಿವಿಧ ಸೆಕ್ಷನ್‌ಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸ್‌) ಕಾಯ್ದೆಯ ಅಡಿಯಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಹಿನ್ನೆಲೆಯಲ್ಲಿ 48 ವರ್ಷದ ಪಪ್ಪೆನ್ ಮಾಸ್ಟರ್ ಎಂದೂ ಕರೆಯಲಾಗುವ ಪದ್ಮರಾಜನ್‌ ಕೆ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಇದಲ್ಲದೇ, ಪದ್ಮರಾಜನ್‌ ಕೆಲಸ ಮಾಡುತ್ತಿದ್ದ ಶಾಲೆಯ ವ್ಯವಸ್ಥಾಪಕರು ಸಹ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಶಿವನ್‌ಕುಟ್ಟಿ ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.ಇದಲ್ಲದೇ, ನ್ಯಾಯಾಲಯದ ತೀರ್ಪಿನ ನಂತರ, ಸಾಮಾನ್ಯ ಶಿಕ್ಷಣ ಇಲಾಖೆಯು ಶಾಲಾ ಆಡಳಿತ ಮಂಡಳಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಹ ನಿರ್ದೇಶನ ನೀಡಿತ್ತು.ಪ್ರಾಸಿಕ್ಯೂಷನ್ ಪ್ರಕಾರ, ಪದ್ಮರಾಜನ್‌ ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ಮತ್ತು ಆತನ ನಿವಾಸದಲ್ಲಿ 10 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವುದು ಸಾಬೀತಾಗಿದೆ.ಈ ವಿಚಾರವಾಗಿ 2020ರ ಮಾರ್ಚ್ 17 ರಂದು ಪಾನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಏಪ್ರಿಲ್ 15 ರಂದು ಆರೋಪಿಯನ್ನು ಬಂಧಿಸಿದ್ದರು.