Home Crime Shivamogga: ಮದುವೆ ಆಗು ಎಂದು ಹಿಂದೆ ಬಿದ್ದದ್ದಕ್ಕೆ ಪ್ರಿಯತಮೆಯನ್ನೇ ಭೀಕರವಾಗಿ ಕೊಂದ ಪಾಪಿ !!

Shivamogga: ಮದುವೆ ಆಗು ಎಂದು ಹಿಂದೆ ಬಿದ್ದದ್ದಕ್ಕೆ ಪ್ರಿಯತಮೆಯನ್ನೇ ಭೀಕರವಾಗಿ ಕೊಂದ ಪಾಪಿ !!

Shivamogga

Hindu neighbor gifts plot of land

Hindu neighbour gifts land to Muslim journalist

Shivamogga: ಪ್ರೇಯಸಿ ಕೈ ಕೊಟ್ಟಳು, ಮೋಸ ಮಾಡಿದಳು, ಮದುವೆ ಆಗಲು ಒಪ್ಪಲಿಲ್ಲ, ಬೇರೊಬ್ಬನ ಸಂಘ ಬಯಸಿದಳು ಎಂಬ ಕಾರಣಗಳಿಗೆ ಕೊಲೆಗಳು ನಡೆದ ಅನೇಕ ಪ್ರಸಂಗಗಳನ್ನು ನಾವು ನೋಡಿದ್ದೇವೆ. ಆದರೆ ಮದುವೆ ಆಗು ಎಂದು ದುಂಬಾಲು ಬಿದ್ದ ಪ್ರಿಯತಮೆಯನ್ನೇ ಪಾಪಿ ಪ್ರಿಯಕರ ಕೊಂದ ಘಟನೆ ಬೆಳಕಿಗೆ ಬಂದಿದೆ.

ಹೌದು, ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಕೊಪ್ಪ ಮೂಲದ ಯುವತಿ ಸೌಮ್ಯ(Sowmya) ಹಾಗೂ ಶಿವಮೊಗ್ಗ(Shivmogga) ಜಿಲ್ಲೆಯ ಸಾಗರ ಮೂಲದ ಯುವಕ ಸೃಜನ್(Srujan) ಕಳೆದೆರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವೇಳೆ ಮದುವೆಯಾಗುವಂತೆ ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಿಯಕರ ಸೃಜನ್ ಸೌಮ್ಯಳನ್ನು ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ.

ಅಂದಹಾಗೆ ತೀರ್ಥಹಳ್ಳಿಯಲ್ಲಿ ಫೈನಾನ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಯುವತಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರ ನಡುವೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ಕೂಡ ಮಾತನಾಡಿಕೊಂಡಿದ್ದರು. ಆದರೆ ಇಬ್ಬರದ್ದು ಬೇರೆ ಬೇರೆ ಸಮುದಾಯ ಆಗಿದ್ದರಿಂದ ಯುವಕನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.

ಇನ್ನು ಜು.2 ರಂದು ತೀರ್ಥಹಳ್ಳಿಗೆ ಹೋಗುತ್ತೇನೆ ಅಂತಾ ಕೊಪ್ಪದಿಂದ ಸೌಮ್ಯ ಬಂದಿದ್ದಳು. ಬಂದವಳು ಸೃಜನ್ ಬಳಿ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಳು. ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಪ್ರಿಯಕರ ಹೇಳಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಯುವತಿ ಮೇಲೆ ಯುವಕ ಬಲವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆಯ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಸೌಮ್ಯ ಸತ್ತಳೆಂದು ಭಯಭೀತನಾದ ಸೃಜನ್, ಆಕೆಯ ಶವವನ್ನು ಮುಂಬಾಳು ಬಳಿ ಹೂತಿದ್ದಾನೆ. ಇತ್ತ ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಕೊಪ್ಪ ಪೊಲೀಸರಿಗೆ ಯುವತಿ ಪೋಷಕರು ದೂರು ನೀಡಿದ್ದರು. ಯುವಕನನ್ನು ಹುಡುಕಿಕೊಂಡು ಕೊಪ್ಪ ಪೊಲೀಸರು ಸಾಗರಕ್ಕೆ ಬಂದಾಗ ಯುವಕ ಎಲ್ಲಾ ಘಟನೆ ಬಿಚ್ಚಿಟ್ಟಿದ್ದಾನೆ.

Viral Video: ಶೌಚಕ್ಕೆಂದು ಬಯಲಲ್ಲಿ ಕುಳಿತವನ ಮೇಲೆ ಹೆಬ್ಬಾವು ಅಟ್ಯಾಕ್, ನುಂಗಲು ಯತ್ನಿಸೋ ಭಯಾನಕ ವಿಡಿಯೋ ವೈರಲ್!!