Home Crime 15 ದಿನಗಳಿಂದ ಲಾಡ್ಜ್‌ನಲ್ಲಿ ವಾಸವಿದ್ದ ಸಲೀಂ-ಮೈಸೂರು ಸ್ಫೋಟ ಪ್ರಕರಣಕ್ಕೆ ಎನ್‌ಐಎ ಎಂಟ್ರಿ

15 ದಿನಗಳಿಂದ ಲಾಡ್ಜ್‌ನಲ್ಲಿ ವಾಸವಿದ್ದ ಸಲೀಂ-ಮೈಸೂರು ಸ್ಫೋಟ ಪ್ರಕರಣಕ್ಕೆ ಎನ್‌ಐಎ ಎಂಟ್ರಿ

Image Credit: Tv9 Kannada

Hindu neighbor gifts plot of land

Hindu neighbour gifts land to Muslim journalist

ಮೈಸೂರು: ಹೀಲಿಯಂ ಸಿಲಿಂಡರ್‌ ಸ್ಫೋಟ ಪ್ರಕರಣಕ್ಕೆ ರಾಷ್ಟ್ರೀಯ ತನಿಖೆ ದಳ ಎಂಟ್ರಿಯಾಗಿದ್ದು, ಇಂದು ಮೈಸೂರಿಗೆ ಎನ್‌ಐಎ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪೊಲೀಸರ ಜೊತೆ ತನಿಖೆಯ ಮಾಹಿತಿ ಪಡೆಯಲಿದ್ದಾರೆ.

ಹೀಲಿಯಂ ಸಾಧಾರಣವಾಗಿ ಸ್ಫೋಟವಾಗುವುದಿಲ್ಲ. ಆದರೂ ಅರಮನೆಯ ಆವರಣದಲ್ಲಿಯೇ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಹಲವಾರು ಅನುಮಾನಗಳು ಈಗ ವ್ಯಕ್ತವಾಗಿದೆ. ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಬಲೂನ್‌ ಮಾರುತ್ತಿದ್ದ ಸಲೀಂ (40) ಮೃತಪಟ್ಟಿದ್ದು, ಮೃತದೇಹ ಛಿದ್ರವಾಗಿದೆ.

ಮೃತ ಸಲೀಂ ಕೋಲ್ಕತ್ತಾದ ಮೂಲದವನು ಎನ್ನಲಾಗಿತ್ತು, ಆದರೆ ಈಗ ಈತ ಉತ್ತರಪ್ರದೇಶ ಮೂಲದವನು ಎನ್ನುವ ಮಾಹಿತಿ ಲಭ್ಯವಾಗಿದೆ. ಈತ ಮೈಸೂರಿಗೆ ಆಗಮಿಸಿದ್ದು ಕಳೆದ 15 ದಿನಗಳಿಂದ ಲಷ್ಕರ್‌ ಮೊಹಲ್ಲಾದ ಷರೀಫ್‌ ಲಾಡ್ಜ್‌ನಲ್ಲಿ ವಾಸವಾಗಿದ್ದ.