Home Crime Ricky Rai: ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ; ದುಷ್ಕರ್ಮಿಗಳು ಡ್ರೈವಿಂಗ್‌ ಸೀಟ್‌ ಟಾರ್ಗೆಟ್‌...

Ricky Rai: ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ; ದುಷ್ಕರ್ಮಿಗಳು ಡ್ರೈವಿಂಗ್‌ ಸೀಟ್‌ ಟಾರ್ಗೆಟ್‌ ಮಾಡಿ ಫೈರಿಂಗ್‌ ಮಾಡಿದ್ದೇಕೆ?

Hindu neighbor gifts plot of land

Hindu neighbour gifts land to Muslim journalist

Ricky Rai: ರಿಕ್ಕಿ ರೈ ತಮ್ಮ ಫಾರ್ಚೂನರ್‌ ಕಾರಿನಲ್ಲಿ ಡ್ರೈವರ್‌ ಮತ್ತು ಗನ್‌ಮ್ಯಾನ್‌ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶೂಟೌಟ್‌ ನಡೆದಿದೆ. ಬಿಡದಿಯಲ್ಲಿ ತಡರಾತ್ರಿ ಮಾಜಿ ಡಾನ್‌ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಶೂಟೌಟ್‌ ಮಾಡಿರುವ ಘಟನೆ ನಡೆದಿದ್ದು, ಈ ಘಟನೆ ತಡರಾತ್ರಿ 12.50 ರ ವೇಳೆ ಎರಡು ಸುತ್ತು ಗುಂಡು ಹಾರಿಸಲಾಗಿದ್ದು, ದುಷ್ಕರ್ಮಿಗಳು ಡ್ರೈವಿಂಗ್‌ ಸೀಟನ್ನೇ ಗುರಿಯಾಗಿಸಿ ಗುಂಡಿನ ದಾಳಿ ಮಾಡಿರುವುದಾಗಿ ವರದಿಯಾಗಿದೆ.

ರಿಕ್ಕಿ ರೈ ಮೇಲೆ ಶೂಟೌಟ್‌ನಲ್ಲಿ ದುಷ್ಕರ್ಮಿಗಳು ಡ್ರೈವಿಂಗ ಸೀಟನ್ನೇ ಗುರಿಯಾಗಿಸಿದ್ದರು. ಸಾಮಾನ್ಯವಾಗಿ ರಿಕ್ಕಿ ರೈ ತಾನೇ ಕಾರು ಚಾಲನೆ ಮಾಡುತ್ತಿದ್ದ ಕಾರಣ ಡ್ರೈವಿಂಗ್‌ ಸೀಟನ್ನೇ ಟಾರ್ಗೆಟ್‌ ಮಾಡಲಾಗಿತ್ತು. ಆದರೆ ಈ ಬಾರಿ ಕಾರನ್ನು ಚಾಲಕ ರಾಜು ಚಲಾಯಿಸುತ್ತಿದ್ದು. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಪಕ್ಕದ ಸೀಟಿನಲ್ಲಿದ್ದ ರಿಕ್ಕಿ ರೈಗೆ ಗುಂಡು ತಗುಲಿ ಗಂಭೀರ ಗಾಯವಾಗಿದೆ.

ರಿಕ್ಕಿ ರೈ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.