Home Crime Renukaswamy Murder Case: ಕೊಲೆಗೆ ಮುನ್ನ ಪಾರ್ಟಿ ಮಾಡಿದ್ದ ದರ್ಶನ್‌; ಸ್ಥಳ ಮಹಜರಿನ ಚಿತ್ರ ವೈರಲ್‌

Renukaswamy Murder Case: ಕೊಲೆಗೆ ಮುನ್ನ ಪಾರ್ಟಿ ಮಾಡಿದ್ದ ದರ್ಶನ್‌; ಸ್ಥಳ ಮಹಜರಿನ ಚಿತ್ರ ವೈರಲ್‌

Renukaswamy Murder Case
Image Credit: Exclusive photo from TV9 Kannada

Hindu neighbor gifts plot of land

Hindu neighbour gifts land to Muslim journalist

Renukaswamy Murder Case : ದರ್ಶನ್‌ ಮತ್ತು ಗ್ಯಾಂಗ್‌ ವಿರುದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪವಿದ್ದು, ಈ ಪ್ರಕರಣದ ಆರೋಪ ಪಟ್ಟಿ ಸಲ್ಲಿಕೆ ಆಗಿದೆ. ಇದೀಗ ಮಹತ್ವದ ಕೆಲವೊಂದು ಚಿತ್ರಗಳು ಕೂಡಾ ಬಹಿರಂಗಗೊಂಡಿದೆ. ಇದರಲ್ಲಿ ಮುಖ್ಯವಾಗಿ ಕರುಳು ಕಿತ್ತು ಬರುವಂತಹ ಫೋಟೋವೇ ರೇಣುಕಾಸ್ವಾಮಿ ಕೈ ಮುಗಿದು ಬೇಡಿಕೊಳ್ಳುತ್ತಿರುವ ಚಿತ್ರ. ಇದರ ಬೆನ್ನಲ್ಲೇ ಇದೀಗ ದರ್ಶನ್‌ರ ಇನ್ನೊಂದು ಫೋಟೋ ವೈರಲ್‌ ಆಗಿದೆ.

ಕೊಲೆ ನಡೆದ ನಂತರ ದರ್ಶನ್‌ ಹಾಗೂ ಇತರೆ ಆರೋಪಿಗಳ ಬಂಧನದ ನಂತರ ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ, ಸ್ಥಳ ಮಹಜರು ಮಾಡುವಾಗಿನ ಚಿತ್ರವೊಂದು ವೈರಲ್‌ ಆಗಿದೆ. ಇದರಲ್ಲಿ ಆರೋಪಿಗಳಾದ ನಟ ದರ್ಶನ್‌, ವಿನಯ್‌, ಪ್ರದೂಶ್‌ ಅವರುಗಳು ಇದ್ದಾರೆ. ಇದರ ಜೊತೆಗೆ ಚಿಕ್ಕಣ್ಣ ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕೊಲೆ ಮಾಡುವ ಮೊದಲು ಆರೋಪಿ ದರ್ಶನ್‌ ಸೇರಿ ಹಲವು ಮಂದಿ ಬೆಂಗಳೂರಿನ ಸ್ಟೋನಿ ಬ್ರೂಕ್‌ ಹೋಟೆಲ್‌ನಲ್ಲಿ ಪಾರ್ಟಿ ಮಾಡಿಕೊಂಡಿದ್ದರು. ಆದರೆ ದರ್ಶನ್‌ ಬಂಧನದ ನಂತರ ಸ್ಟೋನಿ ಬ್ರೂಕ್‌ಗೆ ಕರೆತಂದಿದ್ದ ಪೊಲೀಸರು ಅಲ್ಲಿ ಪಾರ್ಟಿ ನಡೆದ ಸ್ಥಳದ ಅನುಕ್ರಮದಲ್ಲೇ ಆರೋಪಿಗಳನ್ನು ಕೂರಿಸಿ, ಸ್ಥಳ ಮಹರು ಮಾಡಿರುವ ಫೋಟೋ ವೈರಲ್‌ ಆಗಿದೆ. ಈ ಫೋಟೋ ಟಿವಿ9 ಮಾಧ್ಯಮಕ್ಕೆ ದೊರಕಿದ್ದು, ಇದೀಗ ಈ ಫೋಟೋ ವೈರಲ್‌ ಆಗಿದೆ.

ಆರೋಪಿ ದರ್ಶನ್‌ ಸಪ್ಪಗೆ ಮುಖ ಮಾಡಿ ಕೂತಿರುವುದು ಇಲ್ಲಿ ನೀವು ಕಾಣಬಹುದು. ಮಾತ್ರವಲ್ಲ ನಟ ಚಿಕ್ಕಣ್ಣ ಕೂಡಾ ಇಲ್ಲಿದ್ದಾರೆ. ಆತಂಕದ ರೀತಿಯಲ್ಲಿ ಚಿಕ್ಕಣ್ಣ ಇರುವುದು ಸ್ಪಷ್ಟವಾಗಿ ಕಾಣುತ್ತದೆ. ಸ್ಟೋನಿ ಬ್ರೂಕ್‌ನ ಮಾಲೀಕ ಆರೋಪಿ ವಿನಯ್‌ ಕೂಡಾ ಈ ಚಿತ್ರದಲ್ಲಿದ್ದಾರೆ.