Home Crime Rape Case Bhopal: ಹಾಸ್ಟೆಲ್‌ನಲ್ಲಿದ್ದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಶಾಲೆಯ ಮಾಲೀಕ :...

Rape Case Bhopal: ಹಾಸ್ಟೆಲ್‌ನಲ್ಲಿದ್ದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಶಾಲೆಯ ಮಾಲೀಕ : 2 ವಾರಗಳ ಸತತ ಕಾರ್ಯಾಚರಣೆ ಬಳಿಕ ಅರೆಸ್ಟ್

Rape Case Bhopal

Hindu neighbor gifts plot of land

Hindu neighbour gifts land to Muslim journalist

Rape Case Bhopal: ಶಾಲೆಯ ಮಾಲೀಕನೊಬ್ಬ (School owner) ತನ್ನದೇ ಶಾಲೆಯ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿದ್ದ (Rape) ಪ್ರಕರಣದಲ್ಲಿ  ಪೊಲೀಸರು ಸತತ ಎರಡು ವಾರಗಳಿಗೂ ಹೆಚ್ಚು ಕಾಲ ತನಿಖೆ ನಡೆಸಿ ಕೊನೆಗೆ ಶಾಲೆಯ ಮಾಲೀಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Majaa Talkies: ಅಭಿಮಾನಿಗಳಿಗೆ ‘ಮಜಾ ಟಾಕೀಸ್’ ಹೊಸ ಸೀಸನ್ ಅಪ್ಡೇಟ್ ನೀಡಿದ ಸೃಜನ್ ಲೋಕೇಶ್!

ತಾನು ಶಾಲೆಯ ಹಾಸ್ಟೆಲ್ ನಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಶಾಲೆಯ ಮಾಲೀಕ ತನ್ನ ಮೇಲೆ ಅತ್ಯಾಚಾರ(Rape) ವೆಸಗಿದ್ದಾನೆ ಎಂದು ಬಾಲಕಿ ತನ್ನ ತಾಯಿಯೊಡನೆ ಪೊಲೀಸ್ ಠಾಣೆಗೆ(Police station) ಬಂದು ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಆರೋಪಿಯ ಮೇಲೆ ಏಪ್ರಿಲ್ 30 ರಂದು ಪೋಕ್ಸೋ ಪ್ರಕರಣ(Pocso Act) ದಾಖಲಿಸಿ ಹಾಗೆಯೇ ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಅಪರಾಧಕ್ಕೆ ಸಹಕರ ನೀಡಿದ ಆರೋಪದ ಮೇಲೆ ದೂರು ದಾಖಲಿಸಿದ್ದರು. ಈ ವಿಷಯ ಸಿಎಂ ಮೋಹನ್‌ ಯಾದವ್(Mohan yadav) ಅವರ ಗಮನಕ್ಕೆ ಬಂದಿದ್ದರಿಂದ ಎಸ್‌ಐಟಿ(SIT) ತನಿಖೆಗೆ ಆದೇಶಿಸಿದ್ದರು.

ಇದನ್ನೂ ಓದಿ: Hindu Muslim Converts: ಹಿಂದೂ ಧರ್ಮದ ಪ್ರೇಮಿಯನ್ನು ಸೇರಲು ಮುಸ್ಲಿಂ ಧರ್ಮದಿಂದ ಮತಾಂತರಗೊಂಡ ಯುವತಿ!

ತನಿಖೆ ಆರಂಭಿಸಿದ ವಿಶೇಷ ತನಿಖಾ ತಂಡ ಎರಡು ವಾರಗಳಿಗೂ ಹೆಚ್ಚು ಕಾಲ ತನಿಖೆ ನಡೆಸಿ(Investigation) ಕೊನೆಗೆ ಶಾಲೆಯ ಮಾಲೀಕರನ್ನು ಬಂಧಿಸಿದ್ದಾರೆ.‌ ಇದೇ ವೇಳೆ ಪ್ರಕರಣ ದಾಖಲಿಸದಂತೆ ಸಂತ್ರಸ್ತೆಯ ತಾಯಿಯ ಮೇಲೆ ಒತ್ತಡ ಹೇರಿದ್ದ ಪೊಲೀಸ್ ಅಧಿಕಾರಿಯನ್ನೂ (police officer) ಬಂಧಿಸಲಾಗಿದೆ. 8 ವರ್ಷದ ಬಾಲಕಿ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅಲ್ಲದೆ ಸಂತ್ರಸ್ತ ಬಾಲಕಿಯ ತಾಯಿಗೆ ದೂರು ನೀಡದಂತೆ ಒತ್ತಡ ಹೇರಿದ್ದ ಎಸ್‌ಐ ಪ್ರಕಾಶ್ ಸಿಂಗ್ ರಜಪೂತ್ ಅವರನ್ನು ಅಮಾನತುಗೊಳಿಸಲಾಗಿದೆ. ಅಸಲಿಗೆ ಈ ದುಷ್ಕೃತ್ಯ ನಡೆದಿರುವುದು ಮಧ್ಯಪ್ರದೇಶದ(Madhya pradesh) ರಾಜಧಾನಿ ಭೋಪಾಲ್(Bhopal)ನಲ್ಲಿ.