Home Crime Puttur: ಶಿಕ್ಷಕರ ಕಿರುಕುಳ ಆರೋಪ; ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ?

Puttur: ಶಿಕ್ಷಕರ ಕಿರುಕುಳ ಆರೋಪ; ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ?

Hindu neighbor gifts plot of land

Hindu neighbour gifts land to Muslim journalist

Puttur: ಶಾಲೆ ಎನ್ನುವುದು ಒಂದು ಜ್ಞಾನ ದೇಗುಲ. ಶಿಕ್ಷಕರು ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ನಡೆಸುವವರು. ಆದರೆ ಇತ್ತೀಚೆಗೆ ಶಾಲೆ ಎನ್ನುವುದು ಬಿಜಿನೆಸ್‌ ಆಗ್ಬಿಟ್ಟಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಮಕ್ಕಳು ಕೇವಲ ರಿಸಲ್ಟ್‌ ತರುವ ಮಿಷಿನ್‌ಗಳೇ ಎನ್ನುವ ಯೋಚನೆ ಶುರುವಾಗಿ ಬಿಟ್ಟಿದೆ ಎನ್ನುವ ಆತಂಕ ಶುರುವಾಗಿದೆ. ಇದಕ್ಕೆ ಕಾರಣ ಇಲ್ಲಿ ನಡೆದಿರುವ ಒಂದು ಘಟನೆ.

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಕಲ್ಲೇರಿ ಮೂಲದ ವಿದ್ಯಾರ್ಥಿನಿ ಇದೀಗ ಪಡೀಲಿನಲ್ಲಿದ್ದು, ಪುತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾಳೆ. ಈಕೆ ಕರಾಯ ಸರಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೀಗ ಪುತ್ತೂರಿಗೆ ಬಂದಿದ್ದಾರೆ.

ಆದರೆ ವಿದ್ಯಾರ್ಥಿನಿ ಸರಿಯಾಗಿ ಕಲಿಯುತ್ತಿಲ್ಲ ಎನ್ನುವ ಕಾರಣವನ್ನು ನೀಡಿ ದೂರವಾಣಿ ಮೂಲಕ ಪೋಷಕರಿಗೆ ದೂರು ಹೇಳುತ್ತಿದ್ದು, ನಿಮ್ಮ ಮಗಳಿಂದ ನಮ್ಮ ಶಾಲೆಯ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಮಾನಸಿಕ ಹಿಂಸೆ ನೀಡಲಾಗಿರುವ ಕುರಿತು ಆರೋಪವಿದೆ. ಈ ಕಾರಣಕ್ಕಾಗಿಯೇ ಯುವತಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು, ನೋವಿನ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿರುವ ಕುರಿತು ವರದಿಯಾಗಿದೆ.

ಶಿಕ್ಷಕ ವರ್ಗದವರ ಕಿರುಕುಳದಿಂದ ಬೇಸತ್ತ ತನ್ನ ಮಗಳು  ಹತ್ತನೇ ತರಗತಿಯ ವಿದ್ಯಾರ್ಥಿನಿ ಈ ಕೃತ್ಯಕ್ಕೆ ಕೈ ಹಾಕಿದ್ದಾಳೆಂದು ಆಕೆಯ ತಂದೆ ಆರೋಪ ಮಾಡಿದ್ದಾರೆ. ಇದೀಗ ತೀವ್ರ ಅಸ್ವಸ್ಥಗೊಂಡ ವಿದ್ಯಾರ್ಥಿನಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ವಿದ್ಯಾರ್ಥಿನಿಯ ತಂದೆಯು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ಹಾಗೂ ಮಕ್ಕಳ ಸಹಾಯವಾಣಿಗೆ ದೂರು ನೀಡಲಾಗಿದ್ದು, ಶಿಕ್ಷಕರ ಕಿರುಕುಳದಿಂದ ಅವಮಾನ ಆಗಿದ್ದು, ಇದರಿಂದ ಬಾಲಕಿ ನೊಂದು ಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೋಮವಾರ ಶಾಲೆಗೆ ಹೊರಡುವ ಸಂದರ್ಭದಲ್ಲಿಯೇ ವಿದ್ಯಾರ್ಥಿನಿ ನೋವಿನ ಮಾತ್ರೆಯನ್ನೆಲ್ಲ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ. ಪೋಷಕರು ತಮ್ಮ ಮಗಳು ವಾಂತಿ ಮಾಡುತ್ತಿರುವುದನ್ನು ಕಂಡು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪೋಷಕರು ಮಗಳ ಪರಿಸ್ಥಿತಿ ಕಂಡು ಕಂಗಾಲಾಗಿದ್ದು, ಇದಕ್ಕೆಲ್ಲ ಕಾರಣ ಶಾಲೆಯ ಶಿಕ್ಷಕ ವರ್ಗ ಎಂದು ಆರೋಪ ಮಾಡಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಬಂದಿದ್ದು ಹೇಳಿಕೆ ದಾಖಲು ಮಾಡಿದ್ದಾರೆ.