Home Crime Punjab: ಆಮ್‌ ಆದ್ಮಿ ಪಕ್ಷದ ನಾಯಕನ ಪತ್ನಿಯ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!

Punjab: ಆಮ್‌ ಆದ್ಮಿ ಪಕ್ಷದ ನಾಯಕನ ಪತ್ನಿಯ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!

Hindu neighbor gifts plot of land

Hindu neighbour gifts land to Muslim journalist

Punjab: ಮೂರು ತಿಂಗಳ ಹಿಂದೆ ಪಂಜಾಬ್‌ನ ಆಮ್‌ ಆದ್ಮಿ ಪಕ್ಷಕ್ಕೆ ಸೇರಿದ ನಾಯಕ ಅನೋಖ್‌ ಮಿತ್ತಲ್‌ ಪತ್ನಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟ್ವಿಸ್ಟ್‌ವೊಂದು ದೊರಕಿದೆ. ಅಸಲಿಗೆ ಆಕೆಯ ಪತಿ ಅನೋಖ್‌ ಮಿತ್ತಲ್‌ ಅನೈತಿಕ ಸಂಬಂಧ ಹೊಂದಿದ್ದ ಗೆಳತಿಗಾಗಿ ಪತ್ನಿಯನ್ನು ಕೊಲೆ ಮಾಡಲು ಸುಪಾರಿ ನೀಡಿದ್ದ ಎನ್ನುವ ನಿಜಾಂಶ ಬೆಳಕಿಗೆ ಬಂದಿದೆ.

ಸೋಮವಾರ ಲುಧಿಯಾನಾ ಪೊಲೀಸರು ಅನೋಖ್‌ ಮಿತ್ತಲ್‌ ಮತ್ತು ಆತನ ಗೆಳತಿ ಸೇರಿ ಆರು ಜನರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಓರ್ವ ವ್ಯಕ್ತಿ ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಮಿತ್ತಲ್‌ ತನ್ನ ಪ್ರೇಯಸಿಯ ಸಹಾಯದಿಂದ ಪತ್ನಿ ಲಿಪ್ಸಿಯನ್ನು ಕೊಲೆ ಮಾಡಲು ಸುಪಾರಿ ನೀಡಿದ್ದ. ಮಿತ್ತಲ್‌ ಕೊಲೆಗೆ ಹಂತಕರಿಗೆ 2.5 ಲಕ್ಷ ರೂ ಗಳನ್ನು ನೀಡಲು ಒಪ್ಪಿಕೊಂಡಿದ್ದು, ಮುಂಗಡವಾಗಿ 50000 ಸಾವಿರ ರೂ. ಹಣ ನೀಡಿದ್ದ. ಉಳಿದ ಎರಡು ಲಕ್ಷ ಕೊಲೆಯ ಬಳಿಕ ನೀಡುವುದಾಗಿ ಹೇಳಿದ್ದ.

ಮಿತ್ತಲ್‌ ಈ ಹಿಂದೆ ಎರಡು ಬಾರಿ ಕೊಲೆಗೆ ಪ್ರಯತ್ನ ಮಾಡಿದ್ದ. ಅಪರಾಧದ ಹಿಂದಿನ ಉದ್ದೇಶ ಆತನ ಅನೈತಿಕ ಸಂಬಂಧವಾಗಿದ್ದು, ಇದು ಪತ್ನಿಗೆ ಗೊತ್ತಾಗಿತ್ತು. ಇದನ್ನು ಎಲ್ಲಿ ಎಲ್ಲರತ್ರ ಹೇಳಬಹುದು ಎನ್ನುವ ಭಯದಿಂದ ಈತ ಕೊಲೆಗೆ ಸಂಚು ರೂಪಿಸಿದ್ದ.

ಮಿತ್ತಲ್‌ ಪೊಲೀಸರಿಗೆ ಈ ವಿಚಾರ ತಿಳಿಸಿದ್ದು, ಫೆ.15 ರ ರಾತ್ರಿ ಮಧ್ಯರಾತ್ರಿ ಸುಮಾರಿಗೆ ನಾನು ನನ್ನ ಪತ್ನಿ ಜೊತೆ ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಮನೆಗೆ ವಾಪಾಸಾಗುವ ಸಂದರ್ಭದಲ್ಲಿ ರುರ್ಕಾ ರಸ್ತೆಯ ಬಳಿ ಕಾರನ್ನು ನಿಲ್ಲಿಸಿದಾಗ, ಇನ್ನೊಂದು ವಾಹನದಲ್ಲಿ ಬಂದ ಐದಾರು ಮಂದಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದು, ನಾನು ಪ್ರಜ್ಞೆ ಕಳೆದುಕೊಂಡೆ. ಪ್ರಜ್ಞೆ ಬಂದಾಗ ತನ್ನ ಪತ್ನಿ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವುದು ನೋಡಿದೆ ಎಂದು ಹೇಳಿದ್ದಾನೆ.