Home Crime Fake note: ಖರ್ಚಿಗೆ ಹಣ ಇಲ್ಲ ಅಂತ ಖೋಟ ನೋಟು ಪ್ರಿಂಟ್ – ಪೊಲೀಸ್ ಅತಿಥಿಯಾದ...

Fake note: ಖರ್ಚಿಗೆ ಹಣ ಇಲ್ಲ ಅಂತ ಖೋಟ ನೋಟು ಪ್ರಿಂಟ್ – ಪೊಲೀಸ್ ಅತಿಥಿಯಾದ ಟೆಕ್ಸ್ ಟೈಲ್ಸ್ ಉದ್ಯಮಿ ಮಗ

Hindu neighbor gifts plot of land

Hindu neighbour gifts land to Muslim journalist

Fake note: ಹೋಟೆಲ್‌ ಒಂದರಲ್ಲಿ ಖರ್ಚಿಗೆ ಹಣ ಇಲ್ಲ ಅಂತ ಖೋಟ ನೋಟು ಪ್ರಿಂಟ್ ಮಾಡಿ ಯುವಕನೋರ್ವ ಪೊಲೀಸ್ರ ಅತಿಥಿಯಾಗಿದ್ದಾನೆ. ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರಿಂದ ಕ್ರಿಷ್ ಮಾಲಿ (23) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ, ಖಾಸಗಿ ಹೋಟೆಲ್‌ನಲ್ಲಿ ಜೂನ್ 1ರಂದು ರೂಮ್ ಬುಕ್ ಮಾಡಿದ್ದ. ರೂಮ್ ಬುಕ್ ಮಾಡಿ 3 ದಿನ ತಂಗಿದ್ದ ಆರೋಪಿ ಅಲ್ಲಿ ಇದ್ದುಕೊಂಡೆ ಖೋಟಾ ನೋಟು ಪ್ರಿಂಟ್ ಮಾಡಿದ್ದಾನೆ.

ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕ ಪಾವತಿ ಮಾಡಿ ಪರಾರಿಯಾಗಿದ್ದಾನೆ. ಈತ ಟೆಕ್ಸ್ ಟೈಲ್ಸ್ ಉದ್ಯಮಿಯೊಬ್ಬರ ಮಗನಾಗಿದ್ದು, ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿಕೊಂಡು ಆನ್‌ಲೈನ್‌ ಮೂಲಕ ರೂಮ್ ಬುಕ್ ಮಾಡಿದ್ದ. ತನ್ನ ಬಳಿಯಿರುವ ಹಣ ಸಾಕಗುವುದಿಲ್ಲ ಎಂದು ಯೋಚಿಸಿ, ತಾನೇ ನೋಟ್ ಪ್ರಿಂಟ್ ಪ್ಲಾನ್ ಮಾಡಿದ್ದಾನೆ. ಹೊಟೇಲ್‌ ನಲ್ಲಿ ಉಳ್ಕೊಂಡು ಖೋಟಾ ನೋಟುಗಳನ್ನ ಪ್ರಿಂಟ್ ಮಾಡಲು ಯೋಚಿಸಿದ್ದ. ಆರೋಪಿ, ಹೊಟೇಲ್ ಗೆ ಬರುವಾಗ ಬ್ಯಾಗ್‌ನಲ್ಲಿ ಪ್ರಿಂಟರ್, ಸ್ಕ್ಯಾನರ್‌ಗಳನ್ನ ತಂದಿದ್ದ.

ಹೋಟೆಲ್‌ನಲ್ಲಿ ಕುಳಿತೇ 500 ರೂಪಾಯಿ ಮುಖಬೆಲೆಯ ನಕಲಿ ನೋಟು ಪ್ರಿಂಟ್ ಮಾಡಿ ಜೂ. 7ರಂದು ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟು ಮೂಲಕ‌ 3 ಸಾವಿರ ರೂಪಾಯಿ ಬಿಲ್ ಪಾವತಿಸಿ ತೆರಳಿದ್ದ. ರೂಂ ಕ್ಲಿನ್ ಮಾಡುವಾಗ ಆತನ ರೂಂ ಡೆಸ್ಟ್ ಬಿನ್ ನಲ್ಲಿ ಕೆಲ ನಕಲಿ ನೋಟುಗಳು ಪತ್ತೆಯಾದ ಹಿನ್ನೆಲೆ ಕ್ಲಿನ್ ಮಾಡಿದ್ದ ಸಿಬ್ಬಂದಿ ಹೋಟೆಲ್ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾನೆ.

ಅನುಮಾನಗೊಂಡ ಹೋಟೆಲ್ ಸಿಬ್ಬಂದಿಯಿಂದ ಆತ ನೀಡಿದ್ದ ನೋಟನ್ನು ಪರಿಶೀಲನೆ ನಡೆಸಿದ್ದಾರೆ.

ಅವು ನಕಲಿ ಎಂದು ತಿಳಿದು ಆತ ತಂಗಿದ್ದ ರೂಮ್‌ನಲ್ಲಿ ಪರಿಶೀಲನೆ ನಡೆಸಿದಾಗ ಬಿಳಿ ಹಾಳೆಗಳ ಬಂಡಲ್, ನಕಲಿ ನೋಟಿನ ಚೂರುಗಳು ಪತ್ತೆಯಾಗಿದೆ. ಆ ಕೂಡಲೇ ಹೋಟೆಲ್ ಮ್ಯಾನೇಜರ್ ಮೊಹಮ್ಮದ್ ಷರೀಫ್ ಉದ್ದೀನ್ ಪೊಲೀಸರಿಗೆ ದೂರ ನೀಡಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು, ರೂಮ್ ಬಾಡಿಗೆಗೆ ಪಡೆದುಕೊಳ್ಳುವಾಗ ಆರೋಪಿ ನೀಡಿದ್ದ ಆಧಾರ್‌ನಲ್ಲಿದ್ದ ವಿಳಾಸ ಆಧರಿಸಿ ಆತನನ್ನು ಬಂಧಿಸಿದ್ದಾರೆ. ಈ ರೀತಿಯ ನಕಲಿ ನೋಟುಗಳನ್ನ ಆರೋಪಿ ಬೇರೆ ಎಲ್ಲಿಯಾದರೂ ನೀಡಿದ್ದನಾ ಎಂದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.