Home Crime Prajwal Revanna: 60ರ ವೃದ್ಧೆಯನ್ನೂ ಬಿಡದ ಪ್ರಜ್ವಲ್- ರೂಮಿಗೆ ಕರೆಸಿ ಏನೆಲ್ಲಾ ಮಾಡಿದ್ದ ಗೊತ್ತಾ ...

Prajwal Revanna: 60ರ ವೃದ್ಧೆಯನ್ನೂ ಬಿಡದ ಪ್ರಜ್ವಲ್- ರೂಮಿಗೆ ಕರೆಸಿ ಏನೆಲ್ಲಾ ಮಾಡಿದ್ದ ಗೊತ್ತಾ ?

Hindu neighbor gifts plot of land

Hindu neighbour gifts land to Muslim journalist

Prajwal Revanna: ದೇಶಾದ್ಯಂತ ಸಂಚಲನ ಸೃಷ್ಟಿಸಿದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಮಾಡಿರುವ ಲೈಂಗಿಕ ದೌರ್ಜನ್ಯ ಸತ್ಯ ಎಂಬುದು ಸಾಭೀತಾಗಿದ್ದು ದೋಷಾರೋಪ ಪಟ್ಟಿಯಲ್ಲಿ ಇನ್ನೂ ಭಯಾನಕ ವಿಚಾರಗಳು ಬಹಿರಂಗವಾಗಿವೆ.

ಹೌದು, ಪ್ರಜ್ವಲ್ ರೇವಣ್ಣ(Prajwal Revanna)ವಿರುದ್ಧ ಎರಡನೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ದೋಷಾರೋಪ ಪಟ್ಟಿಯಲ್ಲಿ 60 ರ ವೃದ್ಧೆ ಮೇಲೆ ಪ್ರಜ್ವಲ್ ಯಾವ ರೀತಿಯಲ್ಲಿ ದೌರ್ಜನ್ಯ ಎಸಗಿದ್ದ ಎನ್ನುವುದು ಬಹಿರಂಗವಾಗಿದ್ದು, ಈ ಕಾಮಾಂಧನ ಮೇಲೆ ಅಸಹ್ಯ ಹುಟ್ಟುವಂತೆ ಮಾಡುತ್ತದೆ.

ಅಂದಹಾಗೆ 2021 ರಲ್ಲಿ ಕೊವಿಡ್ ಲಾಕ್ ಡೌನ್ ಗೆ ಮೊದಲು ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ತೋಟದ ಮನೆಗೆ ಒಂದು ದಿನ ಮಧ್ಯಾಹ್ನ ಬಂದಿದ್ದ ಪ್ರಜ್ವಲ್ ರೇವಣ್ಣ ಅಲ್ಲೇ ಮನೆ ಕ್ಲೀನ್ ಮಾಡುತ್ತಿದ್ದ ಸಂತ್ರಸ್ತ ಮಹಿಳೆಯನ್ನು ಕರೆದು ಏನು ಕ್ಲೀನ್ ಆಯ್ತಾ ಎಂದು ಕೇಳಿ ಬಳಿಕ ಒಂದು ಲೋಟ ನೀರು ತಂದುಕೊಡುವಂತೆ ಹೇಳಿ ರೂಮಿಗೆ ಹೋಗಿದ್ದಾರೆ. ವೃದ್ಧ ಮಹಿಳೆ ರೂಂಗೆ ಬಂದಾಗ ಬಾಗಿಲು ಭದ್ರಪಡಿಸಿಕೊಂಡ ಪ್ರಜ್ವಲ್ ನಿನ್ನ ಬಟ್ಟೆ ಬಿಚ್ಚು ಎಂದು ಬೆದರಿಸಿದ್ದಾರೆ.

ಅದಕ್ಕೆ ಭಯಗೊಂಡ ಮಹಿಳೆ ಬೇಡ ಬಿಡಣ್ಣಾ.. ಭಯ ಆಯ್ತದೆ ಎಂದಿದ್ದಾರೆ. ಆದರೂ ಕೇಳದೇ ಬೆದರಿಸಿ ಆಕೆಯ ಬಟ್ಟೆ ಬಿಚ್ಚಿಸಿ ವಿಡಿಯೋ, ಫೋಟೋ ತೆಗೆದುಕೊಂಡಿದ್ದಾರೆ. ಆ ಮಹಿಳೆ ಬಾತ್ ರೂಂಗೆ ಹೋಗಬೇಕು, ಅರ್ಜೆಂಟ್ ಎಂದರೂ ಕೇಳದೇ ತನ್ನ ತಾಯಿ ವಯಸ್ಸಿನ ಆಕೆಯ ಮೇಲೆ ಈ ಪಾಪಿ ಅತ್ಯಾಚಾರವೆಸಗಿದ್ದಾನೆ. ಇಷ್ಟೇ ಅಲ್ಲದೆ ಇದನ್ನು ವಿಡಿಯೋ ಮಾಡಿಕೊಂಡಿದ್ದ ಪ್ರಜ್ವಲ್ ಈ ವಿಚಾರವನ್ನು ಯಾರಿಗಾರೂ ಹೇಳಿದರೆ ಈ ವಿಡಿಯೋವನ್ನು ಮಗನಿಗೆ ತೋರಿಸುತ್ತೇನೆ ಎಂದು ಬೆದರಿಸಿದ್ದಾರೆ.