Home Crime Mumbai: ರಸ್ತೆ ಬದಿ ಬುಟ್ಟಿಯಲ್ಲಿ ಮೂರು ದಿನದ ಮಗುವನ್ನು ಬಿಟ್ಟು ಹೋದ ಪೋಷಕರು: ಒಂದು...

Mumbai: ರಸ್ತೆ ಬದಿ ಬುಟ್ಟಿಯಲ್ಲಿ ಮೂರು ದಿನದ ಮಗುವನ್ನು ಬಿಟ್ಟು ಹೋದ ಪೋಷಕರು: ಒಂದು ಪತ್ರ ಪತ್ತೆ

Image Credit: Hindustan Times

Hindu neighbor gifts plot of land

Hindu neighbour gifts land to Muslim journalist

Mumbai: ಮೂರು ದಿನವಾಗಿರುವ ಪುಟ್ಟ ಮಗುವೊಂದು ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ಜೊತೆಗೆ ಬುಟ್ಟಿಯಲ್ಲಿ ಒಂದು ಪತ್ರವನ್ನು ಇಟ್ಟು ಹೋಗಿದ್ದಾರೆ. ಈ ಘಟನೆ ನವಿ ಮುಂಬೈನ ಪನ್ವೆಲ್‌ ಪ್ರದೇಶದ ಟಕ್ಕಾ ಕಾಲೋನಿಯಲ್ಲಿ ಶನಿವಾರ (ಜೂ.28) ನಡೆದಿದೆ.

ಮೂರು ದಿನದ ಮಗುವನ್ನು ನೀಲಿ ಬಣ್ಣದ ಪ್ಲಾಸ್ಟಿಕ್‌ ಬುಟ್ಟಿಯಲ್ಲಿ ನಿರ್ಜನ ಪ್ರದೇಶದಲ್ಲಿ ಇಟ್ಟು ಪೋಷಕರು ಹೋಗಿದ್ದಾರೆ. ಮಗುವಿನ ಕೂಗುವ ಶಬ್ದ ಕೇಳಿ ಅದೇ ರಸ್ತೆಯಲ್ಲಿ ಸಂಚರಿಸುವ ಜನ ಹತ್ತಿರ ಬಂದು ನೋಡಿದಾಗ ಬುಟ್ಟಿಯಲ್ಲಿ ಮಗು ಇರುವುದು ಕಂಡು ಬಂದಿದೆ. ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಮಗುವಿನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪತ್ರದಲ್ಲಿ ಕ್ಷಮಿಸಿ, ತಮ್ಮ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ. ಹಾಗಾಗಿ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಇಂಗ್ಲೀಷ್‌ನಲ್ಲಿ ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗು ಆರೋಗ್ಯವಾಗಿದ್ದು, ಪೋಷಕರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.