Home Crime ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಎನ್‌ಐಎ ಭೇಟಿ; ದೆಹಲಿ ಸ್ಫೋಟಕ್ಕೂ ಉಗ್ರ ಮೊಬೈಲ್‌ ಬಳಸಿದ್ದಕ್ಕೂ ಸಂಪರ್ಕ...

ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಎನ್‌ಐಎ ಭೇಟಿ; ದೆಹಲಿ ಸ್ಫೋಟಕ್ಕೂ ಉಗ್ರ ಮೊಬೈಲ್‌ ಬಳಸಿದ್ದಕ್ಕೂ ಸಂಪರ್ಕ ಇದೆಯಾ?

NIA

Hindu neighbor gifts plot of land

Hindu neighbour gifts land to Muslim journalist

Delhi Blast: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಎನ್‌ಐಎ ಭೇಟಿ ನೀಡಿದ್ದಾರೆ. ಶಂಕಿತ ಉಗ್ರ ಜೈಲಿನಲ್ಲಿ ಮೊಬೈಲ್‌ ಬಳಕೆ ಮಾಡಿರುವುದಕ್ಕೂ ಸಂಬಂಧ ಇದೆಯಾ ಎನ್ನುವ ಅನುಮಾನ ಮೂಡಿದ್ದು, ಈ ಕುರಿತು ಹೆಚ್ಚಿನ ತನಿಖೆ ಮಾಡಲು ಎನ್‌ಐಎ ಜೈಲಿಗೆ ಭೇಟಿ ನೀಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರರು ಹಾಗೂ ರೌಡಿಶೀಟರುಗಳು ಮೊಬೈಲ್‌ ಉಪಯೋಗಿಸುತ್ತಿರುವ ವಿಡಿಯೋ ವೈರಲ್‌ ಆಗಿತ್ತು. ಜುಹಾದ್‌ ಹಮೀದ್‌ ಶಕೀಲ್‌ ಮನ್ನಾ ಕೈಯಲ್ಲಿ ಮೊಬೈಲ್‌ ಇರುವ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎನ್‌ಐಎ ಅಧಿಕಾರಿಗಳು ಬೆಂಗಳೂರು ಜೈಲಿಗೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಈ ತನಿಖೆಯ ಸ್ವಲ್ಪ ಸಮಯದ ನಂತರ ದೆಹಲಿಯಲ್ಲಿ ಕಾರು ಬ್ಲಾಸ್ಟ್‌ ಆಗಿದೆ.

ಹೀಗಾಗಿ ಬೆಂಗಳೂರು ಜೈಲಿನಲ್ಲಿರುವ ಉಗ್ರನಿಗೂ ದೆಹಲಿ ಬ್ಲಾಸ್ಟ್‌ಗೂ ಸಂಬಂಧ ಇದೆಯೇ ಎನ್ನುವ ಅನುಮಾನ ಉಂಟಾಗಿದ್ದು, ಈ ಕಾರಣಕ್ಕೆ ಎನ್‌ಐಎ ಮತ್ತೊಮ್ಮೆ ಜೈಲಿಗೆ ಭೇಟಿ ನೀಡಿದ್ದಾರೆ.

ಜುಹಾದ್‌ ಹಮೀದ್‌ ಶಕೀಲ್‌ ಮನ್ನಾ ನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ಮಾಡಿದ್ದು, ಹಲವು ಮಾಹಿತಿ ದಾಖಲೆಗಳನ್ನು ಪಡೆದುಕೊಂಡಿದ್ದು, ಉಗ್ರ ಜೈಲಿನಲ್ಲಿದ್ದುಕೊಂಡು ಯಾರನ್ನೆಲ್ಲ ಸಂಪರ್ಕ ಮಾಡಿದ್ದಾನೆ ಎನ್ನುವ ಮಾಹಿತಿಯನ್ನು ಅಧೀಕಾರಿಗಳು ಪಡೆದುಕೊಂಡಿದ್ದಾರೆ. ಜೊತೆಗೆ ದೆಹಲಿ ಬ್ಲಾಸ್ಟ್‌ ಕುರಿತೂ ಜುಹಾದ್‌ ಹಮೀದ್‌ ಶಕೀಲ್‌ ಮನ್ನಾ ಬಳಿ ವಿಚಾರಣೆ ಮಾಡಿದ್ದಾರೆ.