Home Crime Neha Murder Case: ಮೊದಲು ನೇಹಾಳೇ ಬಂದು ಮಗನ ಫೋನ್ ನಂಬರ್ ತಗೊಂಡ್ಲು, ಫಸ್ಟ್ ಲವ್...

Neha Murder Case: ಮೊದಲು ನೇಹಾಳೇ ಬಂದು ಮಗನ ಫೋನ್ ನಂಬರ್ ತಗೊಂಡ್ಲು, ಫಸ್ಟ್ ಲವ್ ಮಾಡಿದ್ದು ಅವಳೇ – ಹಂತಕ ಫಯಾಜ್ ತಾಯಿ ಕಣ್ಣೀರು

Neha Murder Case

Hindu neighbor gifts plot of land

Hindu neighbour gifts land to Muslim journalist

Neha Murder Case: ಮಗಳು ನೇಹಾಳೇ ಮೊದಲು ಬಂದು ನನ್ನ ಮಗನ ಫೋನ್ ನಂಬರ್ ಅನ್ನು ಪಡೆದದ್ದು. ಮೊದಲು ಅವಳೇ ಅವನನ್ನು ಹೆಚ್ಚು ಇಷ್ಟಪಡುತ್ತಿದ್ದದ್ದು ಎಂದು ಹಂತಕ ಫಯಾಜ್ ನ ತಾಯಿ ಅಚ್ಚರಿಯ ಸತ್ಯವನ್ನು ಹೊರ ಹಾಕಿದ್ದಾರೆ.

ಇದನ್ನೂ ಓದಿ: Dharmasthala: ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತಾದಿಗಳ ಗಮನಕ್ಕೆ; ಮಂಜುನಾಥ ಸ್ವಾಮಿಯ ದರ್ಶನ ಸಮಯದಲ್ಲಿ ಬದಲಾವಣೆ

https://www.facebook.com/share/AKwMYCcpz5mUrsUC/?mibextid=w8EBqM

ನಿನ್ನೆ ತಾನೆ ಫಯಾಜ್ ತಂದೆ ಬಾಬಾ ಸಾಹೇಬ್‌ ಸುಬಾನಿ(Baba Saheb Subani) ಅವರು ಬಿಕ್ಕಿ ಬಿಕ್ಕಿ ಅಳುತ್ತಾ ನೇಹಾ ಮತ್ತು ನನ್ನ ಮಗ ಫಯಾಜ್ ನಡುವೆ ಅಫೇರ್ ಇತ್ತು. ಅವರು ಲವರ್ಸ್ ಆಗಿದ್ದರು ಎಂದು ಹೇಳಿದ್ದರು. ಇದೀಗ ಫಯಾಜ್(Fayaz) ತಾಯಿ ಕೂಡ ಮಾಧ್ಯಮಗಳ ಮುಂದೆ ಬಂದು ಇದೇ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

ಇದನ್ನೂ ಓದಿ: Milk: ನೀವು ಪ್ರತಿದಿನ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದ? : ವೈದ್ಯರು ಏನು ಹೇಳುತ್ತಾರೆ? : ಇಲ್ಲಿ ತಿಳಿಯಿರಿ

ನೇಹಾ-ಫಯಾಜ್(Neha-Fayaz) ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಒಂದು ವರ್ಷದ ಹಿಂದೆ ಇದು ನನಗೆ ಗೊತ್ತಿತ್ತು. ಮಗ ಫಯಾಜ್ ವರ್ಷದ ಹಿಂದೆ ಯೂನಿವರ್ಸಿಟಿ ಬ್ಲೂ(University Blue)ಆಗಿದ್ದ. ಆಗ ಕಾಲೇಜಲ್ಲಿ ಅವನು ಸ್ವಲ್ಪ ಹೆಸರು ಮಾಡಿದ್ದ. ಈ ವೇಳೆ ಅನೇಕ ಹುಡುಗ-ಹುಡುಗಿಯರು ಅವನ ಫ್ಯಾನ್ ಆದರು. ಇದರಲ್ಲಿ ನೇಹಾ ಕೂಡ ಒಬ್ಬಳು. ಕ್ಯಾಂಟೀನ್ ಅಲ್ಲಿ ಕೂತಿದ್ದಾಗ ಅವಳೇ ಮೊದಲು ಬಂದು ಮಾತನಾಡಿಸಿ ಫಯಾಜ್ ನಂಬರ್ ಪಡೆದು ಮಾತನಾಡುತ್ತಿದ್ದಳು. ಬಳಿಕ ಇಬ್ಬರೂ ಹತ್ತಿರಾದರು. ನನ್ನ ಬಳಿ ಫಯಾಜ್ ಬಂದು ನೇಹಾ ತುಂಬಾ ನನ್ನನ್ನು ಲೈಕ್ ಮಾಡುತ್ತಾಳೆ. ಇಬ್ಬರೂ ಲವ್ ಮಾಡುತ್ತಿದ್ದೇವೆ ಎಂದು ಹೇಳಿದರು. ಆದರೆ ನಾನು ಇದೆಲ್ಲಾ ಬೇಡ ಮಗನೆ ಎಂದು ಬುದ್ದಿ ಹೇಳಿದ್ದೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಮತ್ತೆ ಮಾತನಾಡಿದ ಅವರು ನನ್ನ ಮಗನ ತಪ್ಪಿಗೆ ಇಡೀ ಕರ್ನಾಟಕದ ಜನರಲ್ಲಿ ನಾನು ಕ್ಷಮೆ ಕೇಳುತ್ತೇನೆ. ನೇಹಾ ಅಪ್ಪ ಅಮ್ಮನಲ್ಲೂ ನಾನು ಕ್ಷಮೆ ಬೇಡುತ್ತೇನೆ. ನೇಹಾ ಕೂಡ ನನ್ನ ಮಗಳಿದ್ದಂತೆ. ಈ ನೆಲದಲ್ಲಿ ಯಾವ ಕಾನೂನು ಏನು ಹೇಳುತ್ತೆ ಅದರಂತೆ ಅವನಿಗೆ ಶಿಕ್ಷೆ ಕೊಡಿ. ಅವನನ್ನು ಬಿಡಬೇಡಿ ಎಂದು ಕಣ್ಣೀರು ಹಾಕುತ್ತಲೇ ಹೇಳಿದ್ದಾರೆ.