Home Crime Fraud Case: ಪ್ರಿಯಕರನನ್ನು ಒಲಿಸಿಕೊಳ್ಳಲು ವಶೀಕರಣ ತಂತ್ರ; ಕಪಟ ಸನ್ಯಾಸಿಯಿಂದ ಲಕ್ಷಗಟ್ಟಲೇ ಹಣ ಖಾಲಿ!!...

Fraud Case: ಪ್ರಿಯಕರನನ್ನು ಒಲಿಸಿಕೊಳ್ಳಲು ವಶೀಕರಣ ತಂತ್ರ; ಕಪಟ ಸನ್ಯಾಸಿಯಿಂದ ಲಕ್ಷಗಟ್ಟಲೇ ಹಣ ಖಾಲಿ!! ಮುಂದಾಗಿದ್ದೇನು ಗೊತ್ತಾ??

Fraud Case

Hindu neighbor gifts plot of land

Hindu neighbour gifts land to Muslim journalist

Fraud Case :ಪ್ರೀತಿ ಪ್ರೇಮ(love)ಎಂದು ಸುತ್ತಾಡುತ್ತಿದ್ದ ಜೋಡಿಯ ನಡುವೆ ವೈಮನಸ್ಯ ಉಂಟಾಗಿ ಇಬ್ಬರ ನಡುವೆ ಜಗಳಗಳಾದವು. ಈ ನಡುವೆ ಪ್ರಿಯಕರನ ಮನವೊಲಿಸಿ ಪ್ರೀತಿ ಮರಳಿ ಪಡೆಯಲು ಯುವತಿ ನಾನಾ ಪ್ರಯತ್ನಗಳನ್ನು ಮಾಡಿದರು ಪ್ರಯೋಜನವಾಗಿಲ್ಲ. ಹೀಗಾಗಿ, ಆಕೆ ಪ್ರೇಮಿಯನ್ನು ಮರಳಿ ಪಡೆಯಲು ವಶೀಕರಣಕ್ಕೆ (Attracting Technique). ಆ ತಂತ್ರ ಬಳಸಲು ಮುಂದಾಗಿದ್ದಾಳೆ. ಇದರಿಂದ ಆಕೆ 8.36 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಕಪಟ ಜ್ಯೋತಿಷಿ (Fake Astrologer) ಆಕೆಗೆ (Fraud Case) ದೊಡ್ದ ಟೋಪಿ ಹಾಕಿ ಬಿಟ್ಟಿದ್ದಾನೆ.

ಇದನ್ನೂ ಓದಿ: Arun yogiraj: ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಅರುಣು ಯೋಗಿರಾಜ್’ರಿಂದ ಅಚ್ಚರಿ ಸತ್ಯ ಬಹಿರಂಗ !!

ಜಾಲಹಳ್ಳಿ ನಿವಾಸಿಯಾಗಿರುವ ಮುಸ್ಲಿಂ ಯುವತಿಯೊಬ್ಬಳು ಪ್ರಿಯಕರನನ್ನು ಪಡೆಯುವ ನಿಟ್ಟಿನಲ್ಲಿ ವಶೀಕರಣ ವಿದ್ಯೆ ಮೂಲಕ ಒಲಿಸುಕೊಳ್ಳಲು ಹೋಗಿ ವಂಚನೆಗೆ ಒಳಗಾದ ಘಟನೆ ವರದಿಯಾಗಿದೆ. ಕಪಟ ಜ್ಯೋತಿಷಿ ಅಹಮದ್‌ ದೆಲ್ವಿ ಎಂಬಾತನನ್ನು ಸಂಪರ್ಕಿಸಿದ್ದಾಳೆ.ಯುವತಿ ಆತನನ್ನು ಭೇಟಿಯಾದಾಗ ʻನಿಮ್ಮ ಕುಟುಂಬದವರ ಮೇಲೆ ಯಾರೋ ಮಾಟ ಮಾಡಿದ್ದಾರೆ. ಒಂದು ಪೂಜೆ ಮಾಡಿಸಿದರೆ ಎಲ್ಲವೂ ಸರಿ ಹೋಗುತ್ತದೆʼʼ ಎಂದು ನಂಬಿಸಿ ಕೇವಲ 501 ರೂ. ವಸೂಲಿ ಮಾಡಿದ್ದಾನೆ. ಇದಾದ ಬಳಿಕ 1.45 ಲಕ್ಷ ರೂ. ಕೊಡಲಾಗಿದೆ. ಇದಾದ ಬಳಿಕ ಮತ್ತೆ ಜ್ಯೋತಿಷಿ ಹಣ ಬೇಡಿಕೆಯೊಡ್ಡಿದ್ದಾನೆ. ಇದನ್ನು ಆಕೆ ನಿರಾಕರಿಸಿದ್ದ ರಿಂದ ಆತ ಬ್ಲಾಕ್ಮೇಲ್ ಮಾಡಿದ್ದು,

ನೀನು ಕೊಟ್ಟಿರುವ ಫೋಟೊಗಳನ್ನು, ಆತ್ಮೀಯ ಕ್ಷಣಗಳನ್ನು ಬಯಲು ಮಾಡುತ್ತೇನೆ ಎಂದು ಹೆದರಿಸಿದ್ದಾನೆ ಎನ್ನಲಾಗಿದೆ. ಅರೆಬರೆ ಪೂಜೆ ಮಾಡಿದರೆ ನಿನ್ನ ಪ್ರಿಯಕರ ರಕ್ತ ಕಾರಿ ಸಾಯ್ತಾನೆ, ಇಲ್ಲವೇ ನಾವೇ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಲಾಗಿ ಹೀಗೆ ಬೆದರಿಕೆ ತಂತ್ರದಿಂದಲೇ ಅಹಮದ್‌ ದಲ್ವಿ ಒಟ್ಟು 8.36 ಲಕ್ಷ ರೂ. ಪೀಕಿಸಿದ್ದ.ಈ ನಡುವೆ, ತಮ್ಮ ಮಗಳು ಯಾವುದೋ ಜಾಲದಲ್ಲಿ ಸಿಕ್ಕಿದ ಅನುಮಾನ ಪೋಷಕರಿಗೆ ಗೊತ್ತಾಗಿ ಕೊನೆಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಅಹಮದ್‌, ಲಿಯಾಖತ್‌ ಉಲ್ಲಾ ಖಾನ್‌, ಅಬ್ದುಲ್‌ ರಹಿಮಾನ್‌ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.