Home Crime Murder: ಪಂಜಾಬ್‌ ಆಮ್‌ ಆದ್ಮಿ ಪಕ್ಷದ ನಾಯಕನ ಪತ್ನಿಯ ಭೀಕರ ಕೊಲೆ

Murder: ಪಂಜಾಬ್‌ ಆಮ್‌ ಆದ್ಮಿ ಪಕ್ಷದ ನಾಯಕನ ಪತ್ನಿಯ ಭೀಕರ ಕೊಲೆ

Hindu neighbor gifts plot of land

Hindu neighbour gifts land to Muslim journalist

Murder: ಆಮ್‌ ಆದ್ಮಿ ಪಕ್ಷದ ನಾಯಕ, ಪ್ರಮುಖ ಉದ್ಯಮಿ ಅನೋಖ್‌ ಮಿತ್ತಲ್‌ ಅವರ ಪತ್ನಿ ಲಿಪ್ಸಿ ಮಿತ್ತಲ್‌ ನ್ನು ಶನಿವಾರ ತಡರಾತ್ರಿ ಶಸ್ತ್ರಸಜ್ಜಿತ ದರೋಡೆಕೋರರು ಭೀಕರವಾಗಿ ಹತ್ಯೆ ಮಾಡಿದ್ದಾಲೆ. ಡೆಹ್ಲೋದಲ್ಲಿ ರಾತ್ರಿ ಊಟ ಮುಗಿಸಿ ದಂಪತಿಗಳು ಮನೆಗೆ ವಾಪಾಸಾಗುವ ಸಮಯದಲ್ಲಿ ಈ ಕೃತ್ಯ ನಡೆದಿದೆ.

ಶಸ್ತ್ರಸಜ್ಜಿತ ದರೋಡೆಕೋರರು ಸಿದ್ಛಾನ್‌ ಕಾಲುವೆಯ ಸೇತುವೆಯ ಬಳಿ ರುರ್ಕಾ ಗ್ರಾಮದಲ್ಲಿ ಮಿತ್ತಲ್‌ ದಂಪತಿಯ ವಾಹನವನ್ನು ಅಡ್ಡಗಟ್ಟಿ, ಹರಿತವಾದ ಆಯುಧಗಳಿಂದ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಅನೋಖ್‌ ಮಿತ್ತಲ್‌ ಅವರು ತಡೆಯಲು ಯತ್ನ ಮಾಡಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಡಿಎಂಸಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಈ ದಾಳಿಯಲ್ಲಿ ಲಿಪ್ಸಿ ಮಿತ್ತಲ್‌ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಮಿತ್ತಲ್‌ ದಂಪತಿಯ ಕಾರು, ಇತ್ತರ ವಸ್ತುಗಳೊಂದಿಗೆ ದಾಳಿಕೋರರು ಪರಾರಿಯಾಗಿದ್ದಾರೆ. ನಾಲ್ಕು ತಿಂಗಳ ಹಿಂದೆ ಎಎಪಿಗೆ ಸೇರ್ಪಡೆಗೊಂಡಿದ್ದರು ಅನೋಖ್‌ ಮಿತ್ತಲ್. ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸುತ್ತಿರುವುದಾಗಿಯೂ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.