

Murder: ರಾಜಸ್ಥಾನದ(Rajasthan) ಸಿಕಾರ್ ಜಿಲ್ಲೆಯಲ್ಲಿ ಅಶೋಕ್ ಎಂಬಾತ ತನ್ನ 5 ತಿಂಗಳ ಅವಳಿ ಹೆಣ್ಣು ಮಕ್ಕಳನ್ನು(Twins) ಕೊಂದು ಅದರ ಶವಗಳನ್ನು ಜಿಲ್ಲಾಧಿಕಾರಿ ಕಚೇರಿ ಬಳಿಯ ಖಾಲಿ ಜಾಗದಲ್ಲಿ ಹೂತು ಹಾಕಿದ್ದನು ಎಂದು ಪೊಲೀಸರು ಹೇಳಿದ್ದಾರೆ. ಗಂಡು ಮಗು ಜನಿಸದ ಕಾರಣ ಅಶೋಕ್ ತನ್ನ ಪತ್ನಿ ಅನಿತಾ ಜತೆ ಜಗಳವಾಡಿ, ಆಕೆಯನ್ನು ಹೊಡೆದ ನಂತರ ಅವಳಿ ಮಕ್ಕಳನ್ನು ಎತ್ತಿ ನೆಲಕ್ಕೆ ಎಸೆದು ಕೊಂದಿದ್ದಾನೆ(Murder). ಈ ದಂಪತಿಗೆ 5 ವರ್ಷದ ಮತ್ತೊಂದು ಹೆಣ್ಣು ಮಗುವೂ ಇದೆ. ಪೊಲೀಸರು ಶವಗಳನ್ನು ವಶಪಡಿಸಿಕೊಂಡು, ಅಶೋಕ್‌ನನ್ನು ಬಂಧಿಸಿದ್ದಾರೆ.
“ಬಾಲಕಿಯರ ಮಾವ ಸುನೀಲ್ ಯಾದವ್ ಕೊಟ್ವಾಲಿ, ಪೊಲೀಸ್ ಠಾಣೆಗೆ ಕರೆ ಮಾಡಿ, ಹೆಣ್ಣು ಮಕ್ಕಳ ತಂದೆ ಅವರನ್ನು ಕೊಂದು ಕಲೆಕ್ಟರೇಟ್ ಬಳಿಯ ಜಮೀನಿನಲ್ಲಿ ಶವಗಳನ್ನು ಹೂತು ಹಾಕಿದ್ದಾರೆ ಎಂದು ಹೇಳಿದರು” ಎಂದು ಹೆಚ್ಚುವರಿ ಎಸ್ಪಿ ರೋಷನ್ ಮೀನಾ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್‌ಡಿಎಂ ರಾಜವೀರ್ ಯಾದವ್ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡ ತಡರಾತ್ರಿ ಸ್ಥಳಕ್ಕೆ ಹೋಗಿ ಸ್ಥಳಮಹಜರು ನಡೆಸಿದೆ.
ಶುಕ್ರವಾರ ಬೆಳಿಗ್ಗೆ, ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಮಂಡಳಿಗೆ ಹಸ್ತಾಂತರಿಸಲಾಯಿತು ಎಂದು ಅವರು ಹೇಳಿದರು. ಸಬ್-ಇನ್ಸ್‌ಪೆಕ್ಟರ್ ವೀರೇಂದ್ರ ಕುಮಾರ್ ಅವಳಿ ಮಕ್ಕಳು ನವೆಂಬರ್ 4, 2024 ರಂದು ಜನಿಸಿದವು. ಅಂದಿನಿಂದ ಮನೆಯಲ್ಲಿ ವಿವಾದವಿತ್ತು.
ಅಶೋಕ್ ಮತ್ತು ಅವರ ಕುಟುಂಬ ಸದಸ್ಯರು ಗಂಡು ಮಗುವನ್ನು ಬಯಸಿದ್ದರು.













