Home Crime ಅಪ್ರಾಪ್ತರಿಂದ 8 ನೇ ಕ್ಲಾಸ್‌ ಬಾಲಕಿಗೆ ಕಿರುಕುಳ: ಬಾಲಕರ ತಾಯಂದಿರನ್ನು ಬಂಧನ ಮಾಡಿದ ಪೊಲೀಸರು

ಅಪ್ರಾಪ್ತರಿಂದ 8 ನೇ ಕ್ಲಾಸ್‌ ಬಾಲಕಿಗೆ ಕಿರುಕುಳ: ಬಾಲಕರ ತಾಯಂದಿರನ್ನು ಬಂಧನ ಮಾಡಿದ ಪೊಲೀಸರು

Hindu neighbor gifts plot of land

Hindu neighbour gifts land to Muslim journalist

ಅಪ್ರಾಪ್ತ 8 ನೇ ಕ್ಲಾಸ್‌ನಲ್ಲಿ ಕಲಿಯುತ್ತಿದ್ದ ಹುಡುಗರು ಅಪ್ರಾಪ್ತ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ನಾಲ್ವರು ಹುಡುಗರ ತಾಯಂದಿರನ್ನು ಬಂಧಿಸಿದರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡದ ಕಾರಣಕ್ಕೆ ತಾಯಂದಿರನ್ನು ಬಂಧನ ಮಾಡಿ ಮಕ್ಕಳ ಕೃತ್ಯಕ್ಕೆ ಅವರನ್ನು ಹೊಣೆಗಾರರನ್ನಾಗಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಅಪರಾಧ ತಡೆಗಟ್ಟುವ ವಿಭಾಗಗಳ ಅಡಿಯಲ್ಲಿ ಬುಡೌನ್‌ ಪೊಲೀಸರು ನಾಲ್ವರು ಮಹಿಳೆಯರನ್ನು ಬಂಧನ ಮಾಡಿದ್ದಾರೆ. ಮಹಿಳೆಯರನ್ನು ಶುಕ್ರವಾರ ವಶಕ್ಕೆ ತೆಗೆದುಕೊಂಡು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿದ ನಂತರ ಅವರನ್ನು ವೈಯಕ್ತಿಕ ಬಾಂಡ್‌ಗಳ ಮೇಲೆ ಬಿಡುಗಡೆ ಮಾಡಲಾಗಿದೆ.

8 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತನ್ನ ತಂದೆಯ ಬಳಿ ತಪ್ಪಿತಸ್ಥ ಬಾಲಕರು ತಾನು ಶಾಲೆಗೆ ಹೋಗುವ ಮತ್ತು ಬರುವ ದಾರಿಯಲ್ಲಿ ನನಗೆ ಅಶ್ಲೀಲವಾಗಿ ಕಮೆಂಟ್‌ ಮಾಡುತ್ತಿದ್ದರು ಎಂದು ಹೇಳಿದ್ದಾಳೆ. ಹಾಗಾಗಿ ಬಾಲಕಿ ಕುಟುಂಬದವರು ಬುಧವಾರ ಉಷೈತ್‌ನ ಪೊಲೀಸ್‌ ಠಾಣೆಯನ್ನು ಸಂಪರ್ಕ ಮಾಡಿದ್ದು, ಬಿಎನ್‌ಎಸ್‌ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.