Home Crime Mangaluru: ಯುವತಿಗೆ ‘ಪ್ರೀತಿಸು ಇಲ್ಲಾಂದ್ರೆ 24 ಪೀಸ್ ಮಾಡ್ತೀನಿ’ ಬೆದರಿಕೆ ಹಾಕಿದ್ದ ಪ್ರಕರಣ – ಆರೋಪಿ...

Mangaluru: ಯುವತಿಗೆ ‘ಪ್ರೀತಿಸು ಇಲ್ಲಾಂದ್ರೆ 24 ಪೀಸ್ ಮಾಡ್ತೀನಿ’ ಬೆದರಿಕೆ ಹಾಕಿದ್ದ ಪ್ರಕರಣ – ಆರೋಪಿ ಶಾರೀಕ್ ಅರೆಸ್ಟ್

Hindu neighbor gifts plot of land

Hindu neighbour gifts land to Muslim journalist

Mangaluru: ಸೋಶಿಯಲ್ ಮೀಡಿಯಾಯದಲ್ಲಿ ಯುವತಿಯೊಬ್ಬಳಿಗೆ ಪ್ರೀತಿಸು ಇಲ್ಲಾಂದ್ರೆ ನಿನ್ನನ್ನು 24 ತುಂಡು ತುಂಡಾಗಿ ಕತ್ತರಿಸುವೆ ಎಂದು ಬೆದರಿಕೆ ಹಾಕಿ, ಸೈಬರ್ ಕಿರುಕುಳ ನೀಡಿದ್ದ ಆರೋಪಿ ಶಾರೀಕ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೌದು, ಕರಾವಳಿಯಲ್ಲಿ(Mangaluru ) ಭಾರೀ ಆಕ್ರೋಶಕ್ಕೆ ಕಾರಣವಾದ ಇಡ್ಯಾ ಪರಿಸರದ ಯುವತಿಯೊಬ್ಬಳ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಆಕೆಯ ಅಣ್ಣನಿಗೆ ನನ್ನ ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲ ನಿನ್ನನ್ನು 24 ತುಂಡು ಮಾಡುವೆ ಅಂತ ಬೆದರಿಕೆ ಸಂದೇಶ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಇದೀಗ ಪ್ರಮುಖ ಆರೋಪಿ ಶಾರೀಕ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಫಿರ್ಯಾದಿನ ಆಧಾರದಲ್ಲಿ, ಸುರತ್ಕಲ್ ಪೊಲೀಸ್ ಠಾಣೆಯವರು 22-10-2024 ರಂದು ಪ್ರಕರಣ ಸಂಖ್ಯೆ 123/24 ಅನ್ನು ಭಾರತೀಯ ದಂಡ ಸಂಹಿತೆಯ 78, 352, 351 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66C, 66D ಮತ್ತು 67A & B ಸೆಕ್ಷನ್ ಅಡಿ ದಾಖಲಿಸಿದ್ದಾರೆ. ಶಾರೀಕನನ್ನು ವಿಚಾರಣೆಗಾಗಿ ಠಾಣೆಗೆ ಕರೆಯಲಾಗಿದ್ದು, ಅವರ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಲಾಯಿತು. ಆದರೆ, ಪ್ರಾಥಮಿಕ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಲಭಿಸದ ಕಾರಣ, ಸಂಬಂಧಿತ ಸಾಮಾಜಿಕ ಮಾಧ್ಯಮ ಸೇವಾಪೂರಕರಿಂದ ಹೆಚ್ಚಿನ ಮಾಹಿತಿಯನ್ನು ಕೇಳಲಾಗಿದೆ.