Home Crime Mangalore: Ullal: 2008 ರ ಕೇಸ್‌: ಉ*ಗ್ರ ಯಾಸನ್‌ ಭಟ್ಕಳ್‌ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ವಿಚಾರಣೆ

Mangalore: Ullal: 2008 ರ ಕೇಸ್‌: ಉ*ಗ್ರ ಯಾಸನ್‌ ಭಟ್ಕಳ್‌ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ವಿಚಾರಣೆ

Hindu neighbor gifts plot of land

Hindu neighbour gifts land to Muslim journalist

Mangalore: 2008 ರಲ್ಲಿ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಗ್ರ ಯಾಸಿನ್‌ ಭಟ್ಕಳನನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಂದು (ಜು.24) ನ್ಯಾಯಾಲಯದ ವಿಚಾರಣೆಗೆ ಹಾಜರು ಪಡಿಸಲಾಗಿದೆ. ಆಗಸ್ಟ್‌ 08 ರಂದು ಮುಂದಿನ ವಿಚಾರಣೆಯನ್ನು ನಿಗದಿ ಮಾಡಲಾಗಿದೆ.

ಯಾಸಿನ್‌ ಭಟ್ಕಳ್‌ ವಿರುದ್ಧ ಹಲವು ವರ್ಷಗಳಿಂದ ಪ್ರಕರಣ ವಿಚಾರಣೆಯಾಗದೇ ನ್ಯಾಯಾಲಯದಲ್ಲಿ ಬಾಕಿ ಉಳಿದಿತ್ತು. 2008, ಅಕ್ಟೋಬರ್‌ 04 ರಂದು ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಐಬಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ನಿಷೇಧಿತ ಇಂಡಿಯನ್‌ ಮುಜಾಹೀದ್ದೀನ್‌ ಸಂಘಟನೆಯ ಸದಸ್ಯರದ 7 ಜನ ಆರೋಪಿಗಳನ್ನು ಬಂಧನ ಮಾಡಿದ್ದು, ಆರು ಮಂದಿ ಆರೋಪಿಗಳು ತಲೆ ಮರೆಸಿದ್ದಾರೆ.

ನ್ಯಾಯಾಲಯಕ್ಕೆ ಆರೋಪಿಗಳ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಿ ವಿಚಾರಣೆ ನಡೆದು, ಆರೋಪಿಗಳಾದ ಸಯ್ಯದ್‌ ಮೊಹಮ್ಮದ್‌ ನೌಶಾದ್‌, ಅಹಮ್ಮದ್‌ ಬಾವ ಅಬೂಬಕ್ಕರ್‌, ಫಕೀರ್‌ ಅಹಮ್ಮದ್‌ ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2017 ಎಪ್ರಿಲ್‌ 12 ರಂದು ಆರೋಪಿಗಳಾದ ಮೊಹಮ್ಮದ್‌ ಅಲಿ, ಜಾವೇದ್‌ ಆಲಿ, ಮೊಹಮ್ಮದ್‌ ರಫೀಕ್‌ ಮತ್ತು ಶಬ್ದೀರ್‌ ಭಟ್ಕಳ್‌ ಎಂಬುವವರನ್ನು ಖುಲಾಸೆ ಮಾಡಿ ಅಂತಿಮ ತೀರ್ಪು ನೀಡಲಾಗಿತ್ತು. ಪ್ರಕರಣದ ನ್ಯಾಯಾಲಯದ ವಿಚಾರಣಾ ಕಾಲದಲ್ಲಿ ಯಾಸೀನ್‌ ಭಟ್ಕಳ್‌ ತಲೆಮರೆಸಿಕೊಂಡಿದ್ದ ಕಾರಣ ವಿಚಾರಣೆ ಬಾಕಿಯಿತ್ತು.

ಯಾಸಿನ್‌ ಭಟ್ಕಳ ಇಂಡಿಯನ್‌ ಮುಜಾಹೀದ್ದೀನ್‌ ಸಹ ಸಂಸ್ಥಾಪಕ ಯಾಸಿನ್‌ ಭಟ್ಕಳ ಹೈದರಾಬಾದ್‌ನಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ತಿಹಾರ್‌ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದಾನೆ.