Home Crime Mangalore: ಪುಂಜಾಲಕಟ್ಟೆ: ಮಾಂಸಕ್ಕಾಗಿ ಗೋವು ಸಾಗಾಟ: ಮನೆ ಜಪ್ತಿ

Mangalore: ಪುಂಜಾಲಕಟ್ಟೆ: ಮಾಂಸಕ್ಕಾಗಿ ಗೋವು ಸಾಗಾಟ: ಮನೆ ಜಪ್ತಿ

Hindu neighbor gifts plot of land

Hindu neighbour gifts land to Muslim journalist

Mangalore: ಹತ್ಯೆ ಮಾಡಿ ಮಾಂಸಕ್ಕಾಗಿ ಗೋವನ್ನು ನೀಡಿರುವ ಮನೆ ಹಾಗೂ ಕೊಟ್ಟಿಗೆಯನ್ನು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುಂಜಾಲಕಟ್ಟೆ (Punjalkatte) ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ.

ಬಂಟ್ವಾಳದ ಮಣಿನಾಲ್ಕೂರು-ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಆಟೋದಲ್ಲಿ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರನ್ನು ಸಾಗಾಟ (Illegal Cow Transport) ಮಾಡುತ್ತಿದ್ದರು. ಈ ವೇಳೆ ಪುಂಜಾಲಕಟ್ಟೆ ಪೊಲೀಸರು, ಗೂಡ್ಸ್ ಆಟೋವನ್ನು ತಡೆದು ಪರಿಶೀಲಿಸಿದ್ದಾರೆ. ಅದರಲ್ಲಿ ಒಂದು ಜಾನುವಾರನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಲಾಗಿತ್ತು. ಈ ವೇಳೆ ವಾಹನದ ಚಾಲಕನಲ್ಲಿ ಈ ಬಗ್ಗೆ ವಿಚಾರಿಸಿದಾಗ, ಆತ ತಾನು ಬಂಟ್ವಾಳದ ಶ್ರೀಧರ ಪೂಜಾರಿ (56) ಎಂಬುದಾಗಿ ತಿಳಿಸಿದ್ದಾನೆ. ಈ ಜಾನುವಾರನ್ನು ಬಂಟ್ವಾಳ ಸರಪಾಡಿಯ ಭೋಜ ಮೂಲ್ಯ ಎಂಬುವರ ಮನೆಯಿಂದ ಯಾವುದೇ ದಾಖಲಾತಿ ಪರವಾನಿಗೆ ಇಲ್ಲದೇ ಗೋಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡಿರುವುದಾಗಿ ಹೇಳಿದ್ದಾನೆ.ಈ ಹಿನ್ನೆಲೆಯಲ್ಲಿ ಜಾನುವಾರು, ಆಟೋರಿಕ್ಷಾ ಹಾಗೂ ಒಂದು ಮೊಬೈಲ್ ಫೋನ್‌ನ್ನು ವಶಕ್ಕೆ ಪಡೆಯಲಾಗಿದೆ.

ಭೋಜ ಮೂಲ್ಯರವರ ಮನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾನುವಾರು ಕೊಟ್ಟಿಗೆ ಸೇರಿದಂತೆ ಆವರಣವನ್ನು ಕಾನೂನು ಪ್ರಕ್ರಿಯೆಯಂತೆ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.