Home Crime Mangalore: ನಟೋರಿಯಸ್‌ ರೌಡಿ ಟೋಪಿ ನೌಫಾಲ್‌ ಬರ್ಬರ ಹತ್ಯೆ

Mangalore: ನಟೋರಿಯಸ್‌ ರೌಡಿ ಟೋಪಿ ನೌಫಾಲ್‌ ಬರ್ಬರ ಹತ್ಯೆ

Hindu neighbor gifts plot of land

Hindu neighbour gifts land to Muslim journalist

Mangalore: ನಟೋರಿಯಸ್‌ ರೌಡಿ ಟೋಪಿ ನೌಫಾಲ್‌ (38) ಎಂಬಾತನನ್ನು ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್‌ ಬಳಿ ಬರ್ಬರವಾಗಿ ಕಡಿದು ಕೊಲೆ ಮಾಡಿರುವ ಘಟನೆ ನಡೆದಿರುವ ಕುರಿತು ವರದಿಯಾಗಿದೆ.

ಟೋಪಿ ನೌಫಾಲ್‌ ಮಂಗಳೂರು ನಗರದ ಬಜಾಲ್‌ ಫೈಸಲ್‌ ನಗರದ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಡ್ರಗ್ಸ್‌ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಿದ ನಂತರ ಕಾಸರಗೋಡು ಭಾಗದಲ್ಲಿ ಸಕ್ರಿಯವಾಗಿದ್ದ. ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಉಪ್ಪಳ ಗೇಟ್‌ ಬಳಿಗೆ ಕರೆಸಿದ್ದ ತಂಡ ತಲವಾರುಗಳಿಂದ ಕಡಿದು ಹಾಕಿದೆ ಎನ್ನಲಾಗಿದೆ.

ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಶವವನ್ನು ಪೆರಿಯಾರಂ ಮೆಡಿಕಲ್‌ ಆಸ್ಪತ್ರೆಗೆ ಕಳುಹಿಸಿದ್ದು, ಪೋಸ್ಟ್‌ಮಾರ್ಟಂ ಬಳಿಕ ಕೊಲೆಯ ಕುರಿತು ತಿಳಿಯಬಹುದು ಎಂದು ಹೇಳಿದ್ದಾರೆ.

ತಲೆ, ಕುತ್ತಿಗೆ ಭಾಗ ಕಡಿದ ಗುರುತುಗಳಿದ್ದು, ಶವದ ಮೇಲೆ ಬಿಯಾನ್‌ ಮತ್ತು ಪ್ಯಾಂಟ್‌ ಇದ್ದಿದ್ದು, ಹೊಡೆದಾಟದಲ್ಲಿ ಶರ್ಟ್‌ ಹೋಗಿದೆಯಾ ಎನ್ನುವ ಶಂಕೆ ವ್ಯಕ್ತವಾಗಿದೆ.

2017 ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಜಿಯಾ ಮತ್ತು ಇನ್ನೋರ್ವನ ಡಬಲ್‌ ಮರ್ಡರ್‌ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿದ್ದ, ಆ ಸಂದರ್ಭದಲ್ಲಿ ಮಾರಿಪಳ್ಳ ಜಬ್ಬಾರ್‌, ತಲ್ಲತ್‌ ಗ್ಯಾಂಗ್‌ ಜೊತೆಗೆ ಗುರುತಿಸಿಕೊಂಡಿದ್ದ.

ಈತ ವಸೂಲಿ, ಡ್ರಗ್ಸ್‌, ಅಕ್ರಮ ಗೋಲ್ಡ್‌ ವಹಿವಾಟಿನಲ್ಲಿ ಇದ್ದ ಎನ್ನಲಾಗಿದೆ. ವಾಮಂಜೂರು, ಸುರತ್ಕಲ್‌, ಕಾವೂರು ಸೇರಿ ಹಲವು ಕಡೆಗಳಲ್ಲಿ ಕೇಸುಗಳು ಮೃತನ ಮೇಲೆ ಇದ್ದವು. ಜಿಯಾ ಕೇಸಿನಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಉಪ್ಪಳ ಗೇಟ್‌ ಬಳಿಯಲ್ಲಿ ಕೊಲೆ ಆಗಿರುವುದರಿಂದ ಅಲ್ಲಿನದ್ದೇ ಗ್ಯಾಂಗ್‌ ಈ ಕೃತ್ಯ ಮಾಡಿರುವ ಸಾಧ್ಯತೆಯಿದೆ ಎನ್ನಲಾಗಿದ್ದು, ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.