Home Crime Mangalore: ಗಿರೀಶ್‌ ಮಟ್ಟಣನವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಸಮೀರ್‌ ವಿರುದ್ಧ ಕೇಸು ದಾಖಲು

Mangalore: ಗಿರೀಶ್‌ ಮಟ್ಟಣನವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಸಮೀರ್‌ ವಿರುದ್ಧ ಕೇಸು ದಾಖಲು

Dharmasthala Soujanya

Hindu neighbor gifts plot of land

Hindu neighbour gifts land to Muslim journalist

Mangalore: ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಗಿರೀಶ್‌ ಮಟ್ಟಣ್ಣನವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಯೂಟ್ಯೂಬರ್‌ ಸಮೀರ್‌ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ವರದಿಗಾರ ಹರೀಶ್‌ ನೀಡಿದ ದೂರಿನನ್ವಯ ಬಿಎನ್‌ಎಸ್‌ ಸೆಕ್ಷನ್‌ 115(2), 189(2), 191(2), 352, 190 ಅಡಿ ಎಫ್‌ಐಅರ್‌ ದಾಖಲಾಗಿದೆ. ಇದರಲ್ಲಿ ಗಿರೀಶ್‌ ಮಟ್ಟಣ್ಣನವರ್‌ ಎ1, ಮಹೇಶ್‌ ಶೆಟ್ಟಿ ತಿಮರೋಡಿ ಎ2, ಯೂಟ್ಯೂಬರ್‌ ಸಮೀರ್‌ ಎ3, ಜಯಂತ್‌ ಎ4 ಇತರರ ಹೆಸರು ಉಲ್ಲೇಖ ಮಾಡಲಾಗಿರುವ ಕುರಿತು ವರದಿಯಾಗಿದೆ.

ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಬುಧವಾರ ಹಲ್ಲೆ ನಡೆದ ವಿಚಾರ ತಿಳಿದ ಹಿನ್ನೆಲೆಯಲ್ಲಿ ನಾನು ಹಲ್ಲೆಗೆ ಒಳಗಾದವರನ್ನು ಮಾತನಾಡಿಸಲು ಉಜಿರೆಯ ಬೆನಕ ಆಸ್ಪತ್ರೆಗೆ ಬಂದಿದ್ದೆ. ಈ ಸಂದರ್ಭದಲ್ಲಿ ಗಿರೀಶ್‌ ಮಟ್ಟಣವರ್‌ ಬಳಿ ಬೈಟ್‌ ಕೊಡುವಂತೆ ಕೇಳಿದಾಗ ನನ್ನ ಮೇಲೆ ಬೈಯಲು ಆರಂಭಿಸಿದರು.

ಈ ವೇಳೆ ಅಲ್ಲೇ ಇದ್ದ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಅವರ ಗ್ಯಾಂಗ್‌ ಸದಸ್ಯರು ಹಲ್ಲೆ ಮಾಡಿದ್ದಾರೆ. ಈ ವೇಳೆ ಕೀಳು ಭಾಷೆಯಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಸಮೀರ್‌ ಬೆದರಿಕೆ ಹಾಕಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಪೊಲೀಸರು ನನ್ನನ್ನು ರಕ್ಷಣೆ ಮಾಡಿ ಒಳಗೆ ಕೂರಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಜಯಂತ್‌ ಟಿ ನನ್ನ ವಿಡಿಯೋ ಮಾಡಿ ಹಲ್ಲೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ.