Home Crime Mangalore: ಮಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್‌ ದರೋಡೆ ಯತ್ನ!

Mangalore: ಮಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್‌ ದರೋಡೆ ಯತ್ನ!

Crime

Hindu neighbor gifts plot of land

Hindu neighbour gifts land to Muslim journalist

Mangalore: ಮಂಗಳೂರು ಹೊರವಲಯದ ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಮುತ್ತೂಟ್‌ ಫೈನಾನ್ಸ್‌ಗೆ ಕನ್ನ ಹಾಕಲು ಕಳ್ಳರು ಮುಂದಾಗಿದ್ದು, ಇದೀಗ ಲಾಕ್‌ ಆಗಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ನಟೋರಿಯಸ್‌ ದರೋಡೆಕೋರರ ವಿಚಾರಣೆ ನಡೆಯುತ್ತಿದ್ದು, ಮಂಗಳೂರು ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.

ಕೇರಳ ಮೂಲದ ಐವರು ದರೋಡೆಕೋರರು ಮುತ್ತೂಟ್‌ ಫೈನಾನ್ಸ್‌ ದರೋಡೆಗೆ ಯತ್ನ ಮಾಡಿದ್ದರು. ತಡರಾತ್ರಿ ಕಟ್ಟಡದ ಹಿಂದಿರುವ ಮರವೇರಿ ಫೈನಾನ್ಸ್‌ ಕಟ್ಟಡ ಪ್ರವೇಶಿಸಿದ್ದ ಮುರುಳಿ, ಹರ್ಷದ್‌, ಲತೀಫ್‌, ಸೈಲೆಂಟ್‌ ಡ್ರಿಲ್‌ ಮಿಷನ್‌ ಉಪಯೋಗಿಸಿದ್ದರು. ಆದರೆ ಫೈನಾನ್ಸ್‌ನಲ್ಲಿದ್ದ ಅತ್ಯಾಧುನಿಕ ಸೆನ್ಸರ್‌ ಸೈರನ್‌ ಮೊಳಗಿದ ಕೂಡಲೇ ಮುರಳಿ ಮತ್ತು ಹರ್ಷದ್‌ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದು, ಲತೀಫ್‌ ಪರಾರಿಯಾಗಿದ್ದ.

ಫೈನಾನ್ಸ್‌ ಕಳ್ಳತನಕ್ಕೆ ಯತ್ನದಲ್ಲಿ ಭದ್ರತಾ ಸಲಕರಣೆಗಳೇ ಸಹಕಾರಿಯಾಗಿದೆ. ಜೊತೆಗೆ ಫೈನಾನ್ಸ್‌ನ ಕಂಟ್ರೋಲ್‌ ರೂಂ ಅಧಿಕಾರಿಗಳು, ಸ್ಥಳೀಯರು ಹಾಗೂ ಪೊಲೀಸರು ಸಮಯ ಪ್ರಜ್ಞೆಯಿಂದ ಭಾರೀ ಕಳ್ಳತನ ತಪ್ಪಿದೆ.