Home Crime Mandya: ಮಾಜಿ ಪಾಕ್‌ ಪ್ರಧಾನಿಗೆ ಮೋದಿ ಶೂ ಧರಿಸುವ ರೀತಿ ಫೋಟೋ ಎಡಿಟ್‌; ಕೇಸು ದಾಖಲು!

Mandya: ಮಾಜಿ ಪಾಕ್‌ ಪ್ರಧಾನಿಗೆ ಮೋದಿ ಶೂ ಧರಿಸುವ ರೀತಿ ಫೋಟೋ ಎಡಿಟ್‌; ಕೇಸು ದಾಖಲು!

Hindu neighbor gifts plot of land

Hindu neighbour gifts land to Muslim journalist

Mandya: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ ಯುವಕನನ್ನು ಕಿರುಗಾವಲು ಪೊಲೀಸರು ಬಂಧನ ಮಾಡಿದ್ದು, ಪ್ರಕರಣ ದಾಖಲು ಮಾಡಿದ್ದಾರೆ.

ಕಿರುಗಾವಲು ಗ್ರಾಮದ ಜಾವೀದ್‌ ಪಾಷ (33) ಬಂಧಿತ ಆರೋಪಿ.

ಈತ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ಗೆ ಮೋದಿ ಶೂ ಧರಿಸುವಂತೆ ಎಡಿಟ್‌ ಮಾಡಿದ್ದು ಈ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡುವಂತೆ ಆರೋಪಿ ಪೋಸ್ಟ್‌ ಮಾಡಿದ್ದ. ಈ ಕುರಿತು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಮಾತನಾಡಿದ್ದು, ಅಧಿಕೃತ ಮಾಹಿತಿ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರ ದೂರಿನ ಮೇರೆಗೆ ವಿಚಾರಣೆ ನಡೆಸಿ ಆರೋಪಿಯನ್ನು ಬಂಧನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಎಐ ತಂತ್ರಜ್ಞಾನ ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಣ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಬಿಜೆಪಿ ಹಾಗೂ ಹಿಂದುತ್ವ ಪರ ಕಾರ್ಯಕರ್ತರು ಕಿರುಗಾವಲು ಪೊಲೀಸರ ಗಮನಕ್ಕೆ ಇದನ್ನು ತಂದಿದ್ದಾರೆ.

ಜಾವೀದ್‌ ಪಾಷ ವಿರುದ್ಧ ದೇಶದ್ರೋಹದಡಿ ಪ್ರಕರಣ ದಾಖಲು ಮಾಡಲಾಗಿದ್ದು, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದುತ್ವ ಪರ ಕಾರ್ಯಕರ್ತರು ಕಿರುಗಾವಲು ಪೊಲೀಸ್‌ ಠಾಣೆ ಮುಂದೆ ನೂರಾರು ಮಂದಿ ಜಮಾಯಿಸಿ ಆರೋಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.