Home Crime Kerala: ಕುಟುಂಬದ 5 ಜನ, ಪ್ರೇಯಸಿ ಸೇರಿ ಐವರನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ!

Kerala: ಕುಟುಂಬದ 5 ಜನ, ಪ್ರೇಯಸಿ ಸೇರಿ ಐವರನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ!

Hindu neighbor gifts plot of land

Hindu neighbour gifts land to Muslim journalist

Kerala: ಯುವಕನೋರ್ವ ತನ್ನ ಕುಟುಂಬದವರನ್ನು ಸೇರಿಸಿ ಪ್ರೇಯಸಿಯನ್ನೂ ಕೊಂದು ತಾನೂ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

ಆರೋಪಿ ಯುವಕ ಅಫಾನ್‌ (23) ಪೊಲೀಸರಿಗೆ ಶರಣಾಗಿದ್ದಾನೆ. ತನ್ನ ಕುಟುಂಬದ ಐವರು ಸೇರಿ ಗೆಳತಿ ಒಟ್ಟು ಆರು ಜನರನ್ನು ಈತ ಕ್ರೂರವಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರ ಮುಂದೆ ಶರಣಾದ ಆರೋಪಿ, ಕುಟುಂಬ ಸದಸ್ಯರನ್ನು ಕೊಂದ ನಂತರ ವಿಷ ಸೇವಿಸಿದ್ದಾಗಿ ಹೇಳಿದ್ದಾನೆ. ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಮೂರು ಮನೆಗಳಲ್ಲಿ ಆರು ಮಂದಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.

ಅಫಾನ್‌ ಅವರ ತಾಯಿ ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದ್ದರು. ತಾಯಿ ಶೆಮಿ ಸ್ಥಿತಿ ಗಂಭೀರವಾಗಿದ್ದು, ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು ಅಜ್ಜಿ ಸಲ್ಮಾಬಿ, 13 ವರ್ಷದ ಸಹೋದರ ಅಫ್ಸಾನ್‌, ಆತನ ತಂದೆಯ ಸಹೋದರ ಲತೀಫ್‌, ಲತೀಫ್‌ ಪತ್ನಿ ಶಾಹಿದಾ ಮತ್ತು ಗೆಳತಿ ಫರ್ಜಾನಾ ಎಂದು ಗುರುತಿಸಲಾಗಿದೆ.

ಆರೋಪಿ ವಿರುದ್ಧ ವಿವಿಧ ಪ್ರಕರಣಗಳಲ್ಲಿ ಕೇಸು ದಾಖಲಿಸಿಕೊಂಡು, ಕಾರಣ ಕಂಡು ಹಿಡಿಯುವ ತನಿಖೆ ಪ್ರಗತಿಯಲ್ಲಿದೆ.