Home Crime Haveri: ಸರ್ಕಾರಿ ನೌಕರನಿಗೆ ಲಂಚ ನೀಡಲು ಪತ್ನಿಯ ಮಾಂಗಲ್ಯ ಸರ ಅಡವಿಟ್ಟ ಹಾವೇರಿಯ ವ್ಯಕ್ತಿ

Haveri: ಸರ್ಕಾರಿ ನೌಕರನಿಗೆ ಲಂಚ ನೀಡಲು ಪತ್ನಿಯ ಮಾಂಗಲ್ಯ ಸರ ಅಡವಿಟ್ಟ ಹಾವೇರಿಯ ವ್ಯಕ್ತಿ

Hindu neighbor gifts plot of land

Hindu neighbour gifts land to Muslim journalist

Haveri: ಸರ್ಕಾರಿ ನೌಕರರಿಗೆ ಲಂಚ ನೀಡಲು ಪತ್ನಿಯ ಮಾಂಗಲ್ಯ ಸರವನ್ನ ಅಡವಿಟ್ಟ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ನೆರೆ ಸಂತ್ರಸ್ತರ ವಸತಿ ಯೋಜನೆ ಅಡಿ ಬಿಲ್ ನೀಡಲು ನೌಕರ ಹಣಕ್ಕೆ ಬೇಡಿಕೆ ಇಟ್ಟಂತಹ ಸಂದರ್ಭದಲ್ಲಿ ಮಹಾಂತೇಶ ಬಡಿಗೆರ ಎಂಬುವವರು ಈ ರೀತಿ ಪತ್ನಿಯ ಮಾಂಗಲ್ಯ ಸರವನ್ನ ಅಡವಿಟ್ಟಿದ್ದಾರೆ.

ಇನ್ನು ಲಂಚ ನೀಡಿದರು ಕೂಡ ಇದುವರೆಗೂ ಬಿಲ್ ಮಂಜೂರಾಗಿಲ್ಲ ಎಂದು ಇದೀಗ ಮಹಾಂತೇಶ ಬಡಿಗೇರ ತಹಶೀಲ್ದಾರ್ ಬಳಿ ಹೇಳಿಕೊಂಡಿದ್ದಾರೆ.

ಹಾವೇರಿ ತಾಲೂಕು ಬೆಳವಿಗೆ ಗ್ರಾಮದ ಮಹಾಂತೇಶ್, ಸಾಲ ಮಾಡಿ ಮನೆ ಕಟ್ಟಿದ್ದರಿಂದ ಬಿಲ್ ಅನಿವಾರ್ಯವಾಗಿತ್ತು. ಹೀಗಾಗಿ ಪತ್ನಿಯ ಮಾಂಗಲ್ಯ ಸರವನ್ನು ಅಡವಿಟ್ಟು ನೌಕರ ಮದನ್ ಮೋಹನ್‌ಗೆ 20 ಸಾವಿರ ರೂ ಲಂಚ ನೀಡಿದ್ದಾರೆ. ಆದರೆ ಇದುವರೆಗೂ ಬಿಲ್ ಮಂಜೂರಾಗಿಲ್ಲ. ಈ ಬಗ್ಗೆ ತಹಶೀಲ್ದಾರ್ ಶರಣಮ್ಮ ಅವರನ್ನು ಭೇಟಿಯಾಗಿ ಅಳಲು ತೊಡಿಕೊಂಡಿದ್ದು, ಜೊತೆಗೆ ದೂರು ಸಹ ನೀಡಿದ್ದಾರೆ.

ಇನ್ನು ಹಣ ನೀಡಿರುವಂತಹ ದಾಖಲೆಗಳನ್ನು ನನಗೆ ನೀಡಿ, ತಾನು ಈ ಪ್ರಕರಣದ ಕುರಿತಾಗಿ ಸೂಕ್ತ ತನಿಖೆ ನಡೆಸುತ್ತೇನೆ ಎಂದು ತಹಸಿಲ್ದಾರ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ;Indo-Pak: ಮತ್ತೆ ಮತ್ತೆ ತಲೆಬಾಗುತ್ತಿರುವ ಪಾಕ್ : ಪ್ರಧಾನಿ ಮೋದಿ ಜತೆ ಮಾತನಾಡಲು ಅವಕಾಶ ನೀಡಿ – ಎಲ್ಲಾ ಸಮಸ್ಯೆ ಪರಿಹರಿಸಲು ಸಿದ್ಧ – ಶಹಬಾಜ್ ಷರೀಫ್