Home Crime Mahalakshmi Murder Case: ಮಹಾಲಕ್ಷ್ಮಿ ಹತ್ಯೆ ಪ್ರಕರಣ: ಶಂಕಿತ ಕೊಲೆ ಆರೋಪಿ ಮುಕ್ತಿ ರಂಜನ್...

Mahalakshmi Murder Case: ಮಹಾಲಕ್ಷ್ಮಿ ಹತ್ಯೆ ಪ್ರಕರಣ: ಶಂಕಿತ ಕೊಲೆ ಆರೋಪಿ ಮುಕ್ತಿ ರಂಜನ್ ಆತ್ಮಹತ್ಯೆ

Hindu neighbor gifts plot of land

Hindu neighbour gifts land to Muslim journalist

Mahalakshmi Murder Case: ಕಳೆದ ನಾಲ್ಕು ದಿನಗಳ ಹಿಂದೆ ಕೊಲೆಯಾಗಿ ಫ್ರೀಜ್ ನಲ್ಲಿ ತುಂಡು ತುಂಡಾಗಿ ಪತ್ತೆಯಾಗಿದ್ದ ಮಹಾಲಕ್ಷ್ಮಿ ಎಂಬ ಮಹಿಳೆಯ ಕೊಲೆಯಲ್ಲಿ ಶಾಮಿಲಾಗಿದ್ದ ಎಂದು ಹೇಳಲಾಗುತ್ತಿದ್ದ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಕ್ತಿ ರಂಜನ್ ರಾಯ್ ಸೂಸೈಡ್ ಮಾಡಿಕೊಂಡಿರೋ ಆರೋಪಿ. ಕೊಲೆ ಬಳಿಕ ಮುಕ್ತಿ ರಂಜನ್ ತಲೆಮರೆಸಿಕೊಂಡು ಓಡಾಡ್ತಿದ್ದ. ಈಗಾಗ್ಲೇ ಬೆಂಗಳೂರು ಪೊಲೀಸರು ವಿಚಾರಣೆಗೆ ತೆರಳಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಒಡಿಸ್ಸಾದ ಭದ್ರಾಕ್ ಜಿಲ್ಲೆಯ ಪಂಡಿ ಗ್ರಾಮದ ನಿವಾಸಿ ಮುಕ್ತಿ ರಂಜ‌ನ್, ಕೃತ್ಯ ಎಸಗಿ ತನ್ನ ಸ್ವಗ್ರಾಮ ಬೂತಕಪುರಕ್ಕೆ ತೆರಳಿದ್ದ. ನಿನ್ನೆ ರಾತ್ರಿ ಮನೆಯಿಂದ ಭದ್ರಕ್ ಗೆ ಹೋಗ್ತೀನಿ ಅಂತ ಮನೆಯವರಿಗೆ ತಿಳಿಸಿ ಹೋಗಿದ್ದ. ಮನೆಯಿಂದ ಸ್ಕೂಟಿಯಲ್ಲಿ ಹೋಗಿದ್ದ ಮುಕ್ತಿ ರಂಜನ್, ಇಂದು ಬೆಳಗ್ಗೆ ಕುಳೆಪಾದ ಸ್ಮಶಾನದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಲ್ಯಾಪ್ ಟ್ಯಾಪ್ ನ್ನು ಸ್ಕೂಟಿಯಲ್ಲಿಯೇ ಇಟ್ಟು ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆರ್ ಡಿ ಪಂಡಿ ಪೊಲೀಸರು ತೆರಳಿದ್ದಾರೆ. ನಂತರ ಭದ್ರಕ್ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ. ಧುಶೂರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಆತನ ಬಳಿ ಇದ್ದ ಡೈರಿ ಲ್ಯಾಪ್ ಟ್ಯಾಪ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.