

Lucknow: 1 1 ವರ್ಷದ ಬಾಲಕಿಯೊಂದಿಗೆ ಗಾಜಿಯಾಬಾದ್‌ನ ಮೋದಿನಗರದಲ್ಲಿ ವ್ಯಾಪಾರಿಯೊಬ್ಬ ಅಶ್ಲೀಲವಾಗಿ ನಡೆದುಕೊಂಡ ಘಟನೆಯ ವೀಡಿಯೋ ವೈರಲ್ ಆಗಿದೆ.
ಈ ಘಟನೆ ಸೋಮವಾರ ಸಂಜೆ ಮೋದಿನಗರದ ಕಾಲೋನಿಯೊಂದರಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯವನ್ನು ಅದೇ ಕಾಲೋನಿಯ ನಿವಾಸಿಯೊಬ್ಬರು ವೀಡಿಯೋ ಮಾಡಿದ್ದಾರೆ. ಬಳಿಕ ಈ ವಿಡಿಯೋವನ್ನು ಬಾಲಕಿಯ ಕುಟುಂಬಕ್ಕೆ ತೋರಿಸಿದ್ದಾರೆ. ಇದೀಗ ಈ ವೀಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.
ಆಟಿಕೆ ಖರೀದಿಸಲೆಂದು ಬಂದ ಬಾಲಕಿಯ ಬಳಿ ಬಂದ ಕಾಮುಕ ಆಕೆಯ ಸೊಂಟದ ಸುತ್ತ ಕೈ ಹಾಕಿ ಆಕೆಯ ಎದೆಯನ್ನು ಮುಟ್ಟಿದ್ದಾನೆ. ಮತ್ತೊಬ್ಬ ಅಪ್ರಾಪ್ತ ಬಾಲಕಿ ಕೂಡ ವೀಡಿಯೋದಲ್ಲಿ ಕಾಣಿಸಿದ್ದಾಳೆ.
ವಿಡಿಯೋ ನೋಡಿದ ನಂತರ ಕುಟುಂಬದವರು ಮೋದಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.













