Home Crime Karwar: ಮಟ್ಕಾ ಆಡಿಸಲು ಲಂಚ ಪಡೆದ ಪೊಲೀಸ್‌ಗೆ 8 ವರ್ಷಗಳ ಬಳಿಕ ಜೈಲು ಶಿಕ್ಷೆ!

Karwar: ಮಟ್ಕಾ ಆಡಿಸಲು ಲಂಚ ಪಡೆದ ಪೊಲೀಸ್‌ಗೆ 8 ವರ್ಷಗಳ ಬಳಿಕ ಜೈಲು ಶಿಕ್ಷೆ!

Uttarpradesh

Hindu neighbor gifts plot of land

Hindu neighbour gifts land to Muslim journalist

Karwar: ಮಟ್ಕಾ ಆಡಿಸುವವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಪೊಲೀಸ್‌ ಸಿಬ್ಬಂದಿಗೆ ಎಂಟು ವರ್ಷಗಳ ಬಳಿಕ ಜೈಲು ಶಿಕ್ಷೆ ಪ್ರಕಟವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ ಪೊಲೀಸ್‌ ಸಿಬ್ಬಂದಿ ಮುರಳೀಧರ ನಾಯ್ಕ ಅವರಿಗೆ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡೂವರೆ ವರ್ಷ ಜೈಲು ಶಿಕ್ಷೆ ಹಾಗೂ 20ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಚಂದ್ರಹಾಸ್‌ ಎನ್ನುವವರು ಲೋಕಾಯುಕ್ತ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದು, ಮುರಳೀಧರ್‌ ನಾಯ್ಕ 22 ಸಾವಿರ ಲಂಚದ ಹಣ ಸ್ವೀಕರಿಸುವ ವೇಳೆ ಸಿಕ್ಕಿ ಬಿದ್ದಿದ್ದರು. ಎಂಟು ವರ್ಷಗಳ ಸುದೀರ್ಘ ವಾದ-ಪ್ರತಿವಾದ ನಡೆದು ತೀರ್ಪು ಪ್ರಕಟಗೊಂಡಿದೆ.