Home Crime Kadaba: ತಡರಾತ್ರಿ ಮನೆಯೊಂದಕ್ಕೆ ಅಕ್ರಮ ಪ್ರವೇಶಗೈದ ಕಾನ್‌ಸ್ಟೇಬಲ್‌- ಹಿಡಿದು ಪೊಲೀಸರಿಗೆ ಒಪ್ಪಿಸಿದ ಊರಿನವರು

Kadaba: ತಡರಾತ್ರಿ ಮನೆಯೊಂದಕ್ಕೆ ಅಕ್ರಮ ಪ್ರವೇಶಗೈದ ಕಾನ್‌ಸ್ಟೇಬಲ್‌- ಹಿಡಿದು ಪೊಲೀಸರಿಗೆ ಒಪ್ಪಿಸಿದ ಊರಿನವರು

Hindu neighbor gifts plot of land

Hindu neighbour gifts land to Muslim journalist

Kadaba: ಅಕ್ರಮವಾಗಿ ಮನೆಯೊಳಗೇ ನುಗ್ಗಿದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ಸ್ಥಳೀಯರೆಲ್ಲರೂ ಸೇರಿ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.

ಹೌದು, ಬುಧವಾರ ತಡರಾತ್ರಿ ಕಡಬ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ರಾಜು ನಾಯ್ಕ್ ಮನೆಯೊಂದಕ್ಕೆ ಅಕ್ರಮ ಪ್ರವೇಶಗೈದಾಗ ಊರವರು ಹಿಡಿದಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವ ಸಲುವಾಗಿ ಆತ ಮನೆಯ ಸದಸ್ಯರೊಬ್ಬರಿಗೆ ಹಲ್ಲೆ ನಡೆಸಿದ್ದಾನೆ.

ರಾಜು ನಾಯ್ಕ ತಡರಾತ್ರಿ ಕೊಯಿಲ ನಿವಾಸಿ ಹರೀಶ್ ಎಂಬವರ ಮನೆಗೆ ಅಕ್ರಮವಾಗಿ ಪ್ರವೇಶಗೈದಿದ್ದು, ಈ ವೇಳೆ ಮನೆ ಮಂದಿ ಹಿಡಿದಿದ್ದಾರೆ ಎನ್ನಲಾಗಿದೆ. ಸ್ಥಳದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಚೇತನ್ ಎಂಬವರಿಗೆ ಹಲ್ಲೆಗೈದಿದ್ದಾರೆ. ಈ ಬಗ್ಗೆ ಕೊಯಿಲ ನಿವಾಸಿ ಬಾಬು ಗೌಡ ಎಂಬವರ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಆರೋಪಿ ರಾಜು ನಾಯ್ಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.