Home Crime ಜಗನ್‌ ಹುಟ್ಟುಹಬ್ಬ ಆಚರಣೆ, ಪಟಾಕಿ ಹೆಚ್ಚು ಹೊಡೆಬೇಡಿ ಎಂದ ಗರ್ಭಿಣಿ ಹೊಟ್ಟೆಗೆ ಒದ್ದ ವ್ಯಕ್ತಿ

ಜಗನ್‌ ಹುಟ್ಟುಹಬ್ಬ ಆಚರಣೆ, ಪಟಾಕಿ ಹೆಚ್ಚು ಹೊಡೆಬೇಡಿ ಎಂದ ಗರ್ಭಿಣಿ ಹೊಟ್ಟೆಗೆ ಒದ್ದ ವ್ಯಕ್ತಿ

Hindu neighbor gifts plot of land

Hindu neighbour gifts land to Muslim journalist

ಡಿ.21 ರಂದು ಮಾಜಿ ಮುಖ್ಯಮಂತ್ರಿ ವೈ ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರ ಹುಟ್ಟುಹಬ್ಬದ ಆಚರಣೆ ಇದ್ದಿದ್ದು, ಈ ಸಂದರ್ಭದಲ್ಲಿ ತಾನು ಗರ್ಭಿಣಿ ದಯವಿಟ್ಟು ಹೆಚ್ಚು ಪಟಾಕಿ ಹೊಡೆಯಬೇಡಿ ಎಂದು ಕೇಳಿಕೊಂಡಿದ್ದ ಮಹಿಳೆಯ ಮೇಲೆ ವೈಎಸ್‌ಆರ್‌ ಕಾಂಗ್ರೆಸ್‌ನ ಕಾರ್ಯಕರ್ತ ಅಜಯ್‌ ದೇವ್‌ ಎಂಬಾತ ಮಹಿಳೆಯ ಒದ್ದಿರುವ ಘಟನೆ ನಡೆದಿದೆ.

ಈ ಘಟನೆ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ. ನಂತರ ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತಗೊಂಡ ಹಿನ್ನೆಲೆಯಲ್ಲಿ, ಪೊಲೀಸರು ಮಂಗಳವಾರ ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಮೆರವಣಿಗೆ ಮಾಡಿದರು.

ವೈಎಸ್‌ಆರ್‌ಸಿಪಿ ಕಾರ್ಯಕರ್ತ ಅಂಜಿನಪ್ಪ ಜೊತೆ ಸೇರಿ ಆಕೆಯ ಕತ್ತು ಹಿಸುಕಿ, ಗರ್ಭದಲ್ಲಿರುವ ಮಗುವಿಗೆ ಹಾನಿ ಮಾಡುವ ಉದ್ದೇಶದಿಂದ ಹೊಟ್ಟೆಗೆ ಒದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಜಯ್‌ ದೇವಾ ನನ್ನು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಎರಡನೇ ಆರೋಪಿ ಅಂಜಿನಪ್ಪ ತಲೆಮರೆಸಿಕೊಂಡಿದ್ದು, ಬಂಧನ ಮಾಡಲು ಪ್ರಯತ್ನಗಳು ನಡೆಯುತ್ತಿದೆ.