Home Crime Yasin Bhatkal: ಹೈದರಾಬಾದ್‌ ಬಾಂಬ್‌ ಸ್ಫೋಟ; ಯಾಸಿನ್‌ ಭಟ್ಕಳ್‌ ಸೇರಿ ಐವರಿಗೆ ಮರಣದಂಡನೆ ಶಿಕ್ಷೆ ಎತ್ತಿಹಿಡಿದ...

Yasin Bhatkal: ಹೈದರಾಬಾದ್‌ ಬಾಂಬ್‌ ಸ್ಫೋಟ; ಯಾಸಿನ್‌ ಭಟ್ಕಳ್‌ ಸೇರಿ ಐವರಿಗೆ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್‌!

Hindu neighbor gifts plot of land

Hindu neighbour gifts land to Muslim journalist

Yasin Bhatkal: 2013ರಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯಾಸಿನ್‌ ಭಟ್ಕಳ್‌ ಸೇರಿ ಐವರು ಅಪರಾಧಿಗಳಿಗೆ ನೀಡಿದ ಮರಣದಂಡನೆಯ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್‌ ಎತ್ತಿ ಹಿಡಿದಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್‌ ಮುಜಾಹಿದ್ದೀನ್‌ನ ಐವರು ಭಯೋತ್ಪಾದಕರ ಮರಣದಂಡನೆ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್‌ ಮಂಗಳವಾರ ಎತ್ತಿ ಹಿಡಿದಿದೆ.

2013 ರ ಹೈದರಾಬಾದ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ 18ಜನರು ಸಾವಿಗೀಡಾಗಿದ್ದು, 131 ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಇವರು ಭಾಗಿಯಾಗಿದ್ದರು.

ಡಿ.13,2016 ರಂದು ಐಎಂ ಸಹ ಸಂಸ್ಥಾಪಕ ಮೊಹಮ್ಮದ್‌ ಅಹ್ಮದ್‌ ಸಿದ್ದಿಬಾಪಾ ಅಲಿಯಾಸ್‌ ಯಾಸಿನ್‌ ಭಟ್ಕಳ್‌, ಪಾಕಿಸ್ತಾನಿ ಪ್ರಜೆ ಜಿಯಾ ಉರ್‌ ರೆಹಮಾನ್‌ ಅಲಿಯಾಸ್‌ ವಕಾಸ್‌, ಅಸಾದುಲ್ಲಾ ಅಖ್ತರ್‌ ಅಲಿಯಾಸ್‌ ಮೊನ್ಜಾ ಹದ್ದಿ ಸೇರಿದಂತೆ ಐವರನ್ನು ಎನ್‌ಐಎ ನ್ಯಾಯಾಲಯ ದೋಷಿ ಎಂದು ಘೋಷಣೆ ಮಾಡಿತ್ತು.