Home Crime Uttarpradesh: ಪ್ರಿಯಕರನ ಜೊತೆ ಪತ್ನಿಯ ಮದುವೆ ಮಾಡಿಸಿದ ಗಂಡ ಪ್ರಕರಣ; ಮೀರಠ್‌ ಘಟನೆಗೆ ಹೆದರಿದ ಪತಿರಾಯ!

Uttarpradesh: ಪ್ರಿಯಕರನ ಜೊತೆ ಪತ್ನಿಯ ಮದುವೆ ಮಾಡಿಸಿದ ಗಂಡ ಪ್ರಕರಣ; ಮೀರಠ್‌ ಘಟನೆಗೆ ಹೆದರಿದ ಪತಿರಾಯ!

Hindu neighbor gifts plot of land

Hindu neighbour gifts land to Muslim journalist

Uttarpradesh: ಮೀರಠ್‌ನಲ್ಲಿ ಮಹಿಳೆಯೋರ್ವಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿದ ನಂತರ ಭೀಭತ್ಸ್ಯ ಕೃತ್ಯ ಮಾಡಿರುವ ಕುರಿತು ಈಗಾಗಲೇ ವರದಿಯಾಗಿದೆ. ಈ ಕಾರಣದಿಂದಲೇ ಹೆದರಿದ ಪತಿಯೋರ್ವ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿರುವುದಾಗಿ ಹೇಳಿದ್ದಾನೆ.

ಬಬ್ಲೂ ರಾಧಿಕಾ ಎಂಬಾಕೆಯನ್ನು 2017 ರಲ್ಲಿ ವಿವಾಹವಾಗಿದ್ದ. ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಬಬ್ಲೂ ಯಾವಾಗಲೂ ಹೊರಗಡೆ ದುಡಿಯುತ್ತಿದ್ದ ಕಾರಣ ರಾಧಿಕಾಗೆ ಅದೇ ಗ್ರಾಮದ ವಿಶಾಲ್‌ ಕುಮಾರ್‌ ಎನ್ನುವವನ ಜೊತೆ ಪ್ರೀತಿ ಆಗಿದೆ. ಇದು ತಿಳಿದ ನಂತರ ಬಬ್ಲೂ ಪತ್ನಿಯ ಇಚ್ಛೆ ಪ್ರಕಾರ ಮದುವೆಯನ್ನು ಆಕೆಯ ಪ್ರಿಯಕರನ ಜೊತೆ ವಿವಾಹ ಮಾಡಿಸಿದ್ದ. ಊರಿನ ಹಿರಿಯ ಒಪ್ಪಿಗೆ ತಗೊಂಡು ಊರಿನ ದೇವಸ್ಥಾನದಲ್ಲಿ ಮದುವೆ ಮಾಡಿಸಿಕೊಟ್ಟಿದ್ದಾನೆ.

ಮೀರಠ್‌ನಲ್ಲಿ ಪತ್ನಿಯೋರ್ವಳು ತನ್ನ ಪ್ರಿಯಕರನ ಜೊತೆ ಸೇರಿ ಆಕೆಯ ಗಂಡನನ್ನು ಹತ್ಯೆ ಮಾಡಿರುವುದು ಗೊತ್ತೇ ಇದೆ. ಹೀಗಾಗಿ ನಾನು ನನ್ನ ಪತ್ನಿಯ ಪ್ರೀತಿಗೆ ಅಡ್ಡ ಬಂದರೆ ನನ್ನ ಸ್ಥಿತಿ ಕೂಡಾ ಅದೇ ರೀತಿ ಆಗುವುದು ಬೇಡ ಎನ್ನುವ ದೃಷ್ಟಿಯಿಂದ ಮದುವೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.